           ಮೂಲದೊಡನೆ ಪರಿಶೀಲಿಸಿ

ಇಂಧನ  -
ದಹನದಿಂದ ಉಷ್ಣೋತ್ಪಾದನೆ ಮಾಡುವ ವಸ್ತು (ಫ್ಯುಯಲ್). ಉರುವಲು ಪರ್ಯಾಯ ಪದ. ಉದಾ: ಕಲ್ಲಿದ್ದಲು, ಎಣ್ಣೆ ಅಥವಾ ಯುರೇನಿಯಮ್. ಹೆಚ್ಚಾಗಿ ಎಲ್ಲ ಇಂಧನಗಳೂ ಇಂಗಾಲಪೂರಿತವಾದವು. ಗಾಳಿಯಲ್ಲಿ ಅಥವಾ ಗಾಳಿಯಿಂದ ಪಡೆದ ಆಕ್ಸಿಜನ್ನಿನಲ್ಲಿ ಈ ಇಂಗಾಲಾಂಶ ದಹಿಸುವಾಗ ಉಷ್ಣಶಕ್ತಿ ಉತ್ಪಾದನೆ ಆಗುತ್ತದೆ. ಈ ಸಾಮಾನ್ಯಸೂತ್ರಕ್ಕೆ ಗಮನಾರ್ಹ ಅಪವಾದಗಳು ರಾಸಾಯನಿಕ ಇಂಧನ ಮತ್ತು ಲೋಹಾಧಾರಿತ ಇಂಧನ.  

ಇಂಧನಗಳಿಗೆ ಇರಬೇಕಾದ ಪ್ರಧಾನ ಗುಣಗಳು : 1. ಅಧಿಕ ಕ್ಯಾಲರಿ ಮೌಲ್ಯ (ಕೆಲೊರಿಫಿಕ್ ವ್ಯಾಲ್ಯೂ).  ನಿರ್ದಿಷ್ಟ ಭಾರದ ಇಂಧನದಿಂದ ಎಷ್ಟು ಹೆಚ್ಚು ಉಷ್ಣ ಪಡೆಯಬಹುದು ಎಂಬುದರ ಮೇಲೆ ಅದರ ಮೌಲ್ಯಮಾಪನವಾಗುವುದು.  2. ದಹನಕ್ರಿಯಾವೇಗ ಸಾಧಾರಣವಾಗಿರಬೇಕು. ಯಾವುದೇ ಇಂಧನದಿಂದ ಮೌಲ್ಯ ಮತ್ತು ದಹಿಸುವ ಸ್ಥಳಾವಕಾಶಗಳನ್ನು ಅವಲಂಬಿಸಿರುತ್ತದೆ. ಇಂಗಾಲಪೂರಿತ ಇಂಧನಗಳಿಂದ 28000 ಸೆ. ಮೀರಿದ ಉಷ್ಣತೆಯನ್ನು ಪಡೆದ ದಾಖಲೆಗಳಿಲ್ಲ.  ಥರ್ಮೈಟ್ ಮಿಶ್ರಣದಿಂದ ಕೆಲವೇ ಸೆಕೆಂಡುಗಳಲ್ಲಿ 35000 ಸೆ. ಉಷ್ಣತೆ ಮೂಡುವುದೆಂಬುದು ನಿಜ. ಆದರೆ ಅದರ ಉಷ್ಣದಾಯಕ ಮೌಲ್ಯ ಅಲ್ಪ. ಉಷ್ಣದ ಸರಬರಾಜು ಸತತವಾಗಿದ್ದರೆ ಮಾತ್ರ ಇಂಧನಕ್ಕೆ ಪ್ರಾಶಸ್ತ್ಯ. ಹೀಗಾಗಲು ಸಾಧಾರಣ ವೇಗದಲ್ಲಿ ಇಂಧನವನ್ನು ದಹಿಸುವುದು ಅವಶ್ಯಕ. 3. ಉತ್ಪಾದನ ವೆಚ್ಚ ಕಡಿಮೆಯಾಗಿರಬೇಕು. ಕೈಗಾರಿಕೆಯನ್ನು ಸ್ಥಾಪಿಸುವ ಮುನ್ನ ರಾಸಾಯನಿಕ ತಂತ್ರಜ್ಞ ಅಗ್ಗದ ಇಂಧನದ ತಯಾರಿಕೆಗೆ ಪ್ರಥಮ ಗಮನ ನೀಡುತ್ತಾನೆ. ಇಂಧನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾದರೂ ಒಟ್ಟಾರೆ ಸಹಸ್ರಾರು ರೂಪಾಯಿಗಳು ನಷ್ಟವಾಗುವ ಸಂಭವವಿದೆ. 4. ಸಾಗಾಣಿಕೆಯ ಸೌಲಭ್ಯ : ಇಂಧನದ ಮೂಲದ ಬಳಿ ಕಾರ್ಖಾನೆಯನ್ನು ಸ್ಥಾಪಿಸುವುದು ಯುಕ್ತ. ಆದರೆ ಸಾಮಾನ್ಯ ಪರಿಸ್ಥಿತಿ ತದ್ವಿರುದ್ಧ.  ನಗರಗಳಲ್ಲಿ ಕಾರ್ಖಾನೆಗಳಿದ್ದು ಇಂಧನವನ್ನು ಒಳಪ್ರದೇಶಗಳಿಗೆ ಸಾಗಿಸುವ ಸಂದರ್ಭಗಳೇ ಹೆಚ್ಚು. ಇದರಿಂದ ಸಾಗಾಣಿಕೆಯ ವೆಚ್ಚವೂ ಸೇರಿ ಇಂಧನದ ಬೆಲೆ ದುಬಾರಿಯಾಗುವುದು. ಅನಿಲ ಇಂಧನಗಳನ್ನು ಹತ್ತಿರದ ಪ್ರದೇಶಗಳಿಗೆ ಸಾಗಿಸುವುದು ಸುಲಭ. ಘನ ಮತ್ತು ದ್ರವರೂಪದ ಇಂಧನಗಳನ್ನು ದೂರಕ್ಕೆ ಸಾಗಿಸುವುದು ಕಷ್ಟವಾಗಲಾರದು.  5. ಜ್ವಲನಬಿಂದು (ಇಗ್ನಿಷನ್ ಪಾಯಿಂಟ್) : ಇಂಧನದ ದಾಸ್ತಾನು ಮತ್ತು ಸಾಗಾಣಿಕೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವಿದು.  ಕಡಿಮೆ ಉಷ್ಣತೆಯಲ್ಲಿ ದಹನಪ್ರವೃತ್ತಿಯಿರುವ ಇಂಧನಗಳಿಂದ ಅಗ್ನಿಪ್ರಕರಣಗಳು ಹೆಚ್ಚು ಸಂಭವನೀಯ. ಜ್ವಲನಬಿಂದು ಹೆಚ್ಚಾಗಿರುವುದೂ ಅಪೇಕ್ಷಣೀಯವಲ್ಲ. ಏಕೆಂದರೆ ಅಂಥ ಇಂಧನಗಳ ದಾಸ್ತಾನು ಮತ್ತು ಸಾಗಾಣಿಕೆ ಎಷ್ಟು ಸುಲಭವೋ ಅವನ್ನು ಹೊತ್ತಿಸಿ ಉಷ್ಣ ಪಡೆಯುವುದು ಅಷ್ಟೇ ಪ್ರಯಾಸ. 6. ದಹ್ಯಗುಣವಿರದ ವಸ್ತುಗಳ ಅಂಶ ಆದಷ್ಟು ಕಡಿಮೆ ಇರುವುದು ಲೇಸು. ಕೆಲವು ಸಂದರ್ಭಗಳಲ್ಲಿ (ಮುಖ್ಯವಾಗಿ ಕಲ್ಲಿದ್ದಲು) ದಹನಯೋಗ್ಯವಲ್ಲದ ವಸ್ತುಗಳು ಹೆಚ್ಚಾಗಿದ್ದು ಅವು ಬೂದಿಯಾಗಿ ಉಳಿಯುವುವು. ಅಂಥ ಇಂಧನಗಳ ಉಷ್ಣದಾಯಕಮೌಲ್ಯ ಕಡಿಮೆ. 7. ಅಸಹ್ಯ ಉಪವಸ್ತುಗಳು ಬಿಡುಗಡೆಯಾಗಬಾರದು. ಕೆಲವು ಇಂಧನಗಳನ್ನು ಉರಿಸಿದಾಗ ದುರ್ವಾಸನೆಯುಳ್ಳ ಅನಿಲಗಳು ಹೊರಬೀಳುವುದರಿಂದ ಅಂಥವನ್ನು ಕೈಗಾರಿಕೆಯಲ್ಲಿ ಬಳಸುವಂತಿಲ್ಲ.  

ಇಂಧನಗಳ ವರ್ಗೀಕರಣ : ಇಂಧನಗಳು ಸಸ್ಯಜನ್ಯವಾಗಿದ್ದರೆ ಸಾವಯವ (ಆಗ್ರ್ಯಾನಿಕ್) ವಸ್ತುಗಳಾಗಿಯೂ ಖನಿಜಸಂಬಂಧ ಹೊಂದಿದ್ದರೆ ನಿರವಯವ (ಇನಾಗ್ರ್ಯಾನಿಕ್) ವಸ್ತುಗಳಾಗಿಯೂ ಇರುತ್ತವೆ. ಅವು ಪ್ರಕೃತಿದತ್ತವಾಗಿರಬಹುದು ಅಥವಾ ಮನುಷ್ಯಕೃತವಾಗಿರಬಹುದು (ಕೃತಕ ಇಂಧನ).  ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಇಂಧನಗಳನ್ನು ಕೆಳಕಂಡಂತೆ ಸ್ಥೂಲವಾಗಿ ವಿಂಗಡಿಸಬಹುದು.   

ಭೌತಸ್ಥಿತಿ

ನೈಸರ್ಗಿಕ ಇಂಧನಗಳು

ಕೃತಕ ಇಂಧನಗಳು

   ಘನ

   ದ್ರವ 

   
   ಅನಿಲ

ಸೌದೆ. ಪೀಟ್, ಲಿಗ್ನೈಟ್, ಕಲ್ಲಿದ್ದಲು, 
ಆಂಥ್ರಸೈಟ್. 

ಪೆಟ್ರೋಲಿಯಂ ಜನ್ಯ ವಸ್ತುಗಳು

ನೈಸರ್ಗಿಕ ಅನಿಲ 

ಇದ್ದಲು, ಕೋಕ್ ಬ್ರಿಕೆಟ್ಟುಗಳು. 

ಆಲ್ಕೊಹಾಲ್, ಕೃತಕ ಪೆಟ್ರೋಲ್, ಕೊಲಾಯ್ಡಲ್ 
ಇಂಧನ. 

ಕಲ್ಲಿದ್ದಲು ಅನಿಲ, ಜಲಾನಿಲ, ಜ್ವಲನಾನಿಲ, ಅರೆಜಲಾನಿಲ, ತೈಲಾನಿಲ, ಗ್ರಾಮ ಸಾರಾನಿಲ, 
ಅಸಿಟಲೀನ್, ಬ್ಲೌ ಅನಿಲ.  

ಇಂಧನಗಳ ಉಷ್ಣದಾಯಕ ಮೌಲ್ಯವನ್ನು ಅಳೆಯಲು ಎರಡು ಮಾನಗಳಿವೆ : 1. ಬ್ರಿಟಿಷ್ ಉಷ್ಣಏಕಮಾನ (ಬ್ರಿಟಿಷ್ ಥರ್ಮಲ್ ಯೂನಿಟ್, ಃಖಿU.). ಒಂದು ಪೌಂಡು ನೀರಿನ ಉಷ್ಣತೆಯನ್ನು 320-2120 ಫ್ಯಾ.ಗೆ ಏರಿಸಲು ಅಗತ್ಯವಾದ ಉಷ್ಣದ 1/180 ಭಾಗ.  ಇದರ ಸಂಕ್ಷೇಪರೂಪ ಃಖಿU.  2. ಕ್ಯಾಲರಿ (ಸರಾಸರಿ) (ಮೀನ್‍ಕ್ಯಾಲರಿ) : ಒಂದು ಗ್ರಾಂ ನೀರಿನ ಉಷ್ಣತೆಯನ್ನು 00-1000 ಸೆ.ಗೆ ಏರಿಸಲು ಅಗತ್ಯವಾದ ಉಷ್ಣದ 1/100 ಭಾಗ.  
ಈ ಮಾನಗಳ ಪರಸ್ಪರ ಸಂಬಂಧವನ್ನು ಕೆಳಕಂಡ ಕೋಷ್ಟಕ ತಿಳಿಸುತ್ತದೆ :
        1 ಬಿ.ಟಿ.ಯು  = 252.0 ಕ್ಯಾಲರಿ. 
        1  ಕ್ಯಾಲರಿ/ಗ್ರಾಂ = 1.8 ಬಿ.ಟಿ.ಯು./ಪೌಂ. 
ಘನ ಮತ್ತು ದ್ರವೇಂಧನಗಳ ಉಷ್ಣದಾಯಕ ಮೌಲ್ಯವನ್ನು ಮೇಲ್ಕಂಡ ಯಾವುದಾದರೊಂದು ಮಾನದಲ್ಲಿ ಸೂಚಿಸಬಹುದು. ಆದರೆ ಅನಿಲ ಇಂಧನಗಳ ಉಷ್ಣದಾಯಕ ಮೌಲ್ಯವನ್ನು ವರದಿ ಮಾಡಲು ಬ್ರಿಟಿಷ್ ಉಷ್ಣಏಕಮಾನವನ್ನು ಬಳಸುವುದು ವಾಡಿಕೆ.  
ಘನ ಇಂಧನಗಳು (ನೈಸರ್ಗಿಕ) :  1. ಸೌದೆ : ಭಾರತದಲ್ಲಿ ಹೇರಳವಾಗಿ ದೊರೆಯುವ ಮುಖ್ಯ ಘನ ಇಂಧನವಿದು.  ಅನೇಕ ಅರಣ್ಯಗಳನ್ನು ಇನ್ನೂ ಉಪಯೋಗಿಸಿಕೊಂಡಿಲ್ಲ. ಇಲ್ಲದಿದ್ದರೆ ಸೌದೆ ನಮಗೆ ಶಾಶ್ವತ ಇಂಧನವಾಗುತ್ತಿತ್ತು. ಅದರಲ್ಲಿರುವುದು ಪ್ರಧಾನವಾಗಿ ಸೆಲ್ಯುಲೋಸ್. ಒಣಗಿದ ಸೌದೆಯಲ್ಲಿ ಸುಮಾರು 50% ಇಂಗಾಲ, 35% ಆಕ್ಸಿಜನ್, 7% ನೈಟ್ರೊಜನ್, 6% ಹೈಡ್ರೊಜನ್, 2% ಬೂದಿ ಇವೆ. ಈ ಉರುವಲಿಗೆ ಕೆಲವು ಮುಖ್ಯ ಅನುಕೂಲಗಳಿವೆ. 1. ಶೀಘ್ರ ದಹನಗುಣ-ಇತರ ಇಂಧನಗಳನ್ನು ಹೊತ್ತಿಸಲು ಇದು ಸಹಕಾರಿ. 2. ಬೂದಿ ಮತ್ತು ಮಸಿ (ಸೂಟ್) ಅಂಶ ಅಲ್ಪ. ಆದ್ದರಿಂದ ಗಾಜನ್ನು ಕರಗಿಸುವುದು, ಪಿಂಗಾಣಿ ವಸ್ತುಗಳನ್ನು ಬೇಯಿಸುವುದು ಇತ್ಯಾದಿ ಉದ್ಯಮಗಳಲ್ಲಿ ಇದನ್ನು ನಿರಾತಂಕವಾಗಿ ಬಳಸಬಹುದು.  3. ನಿಡಿದಾದ ಜ್ವಾಲೆ ಕೊಡುತ್ತದೆ. ಆದರೆ ಇದರಲ್ಲಿ ನೀರಿನ ಅಂಶ ಹೆಚ್ಚು.  ಜನ್ಯ ಉಷ್ಣದ ಒಂದು ಭಾಗ ಈ ತೇವಾಂಶವನ್ನು ಹಬೆಯನ್ನಾಗಿ ಮಾಡಲು ಅಪವ್ಯಯವಾಗುತ್ತದೆ. ಆದ್ದರಿಂದ ಸೌದೆಯನ್ನು 1250-1400 ಸೆ.ನಲ್ಲಿ ಒಣಗಿಸಿ ಉಪಯೋಗಿಸುವುದು ಕ್ಷೇಮ.  ಒಣಗಿದ ಸೌದೆಯನ್ನು ಉರಿಸಿ ಪರಮಾವಧಿ 8000 ಸೆ. ಉಷ್ಣತೆ ಮುಟ್ಟಬಹುದು.  ಗಾಳಿಯಲ್ಲಿ ಒಣಗಿಸಿದ ಸೌದೆಯ ಉಷ್ಣದಾಯಕ ಮೌಲ್ಯ, ಕಿಲೋಗ್ರಾಮಿಗೆ 3000-4000 ಕ್ಯಾಲರಿಗಳಷ್ಟು ಇದೆ. 
2. ಪೀಟ್ (ಸಸ್ಯಾಂಗಾರ) :  ಜೌಗು ಪ್ರದೇಶಗಳಲ್ಲಿ ಕೊಳೆಯುವ ಸಸ್ಯಗಳು ಕ್ರಮೇಣ ಪೀಟ್ ಆಗುತ್ತವೆ.  ಯೂರೋಪಿನ ಕೆಲವು ಭಾಗಗಳಲ್ಲಿ ಪೀಟ್ ವಿಪುಲವಾಗಿ ದೊರೆಯುತ್ತದೆ. ಅದರ ಉಷ್ಣದಾಯಕ ಮೌಲ್ಯ ಕಿಲೋಗ್ರಾಮಿಗೆ 4000-5000 ಕ್ಯಾಲರಿಗಳು.  ಇದರಲ್ಲಿ ನಿರವಯವ ವಸ್ತುಗಳ ಮತ್ತು ತೇವದ ಭಾಗ ಹೆಚ್ಚು. ದಹನಾನಂತರ ಇದು ಹುಡಿಯಾಗಿ ತನ್ನಷ್ಟಕ್ಕೆ ನಂದಿಹೋಗುವ ಪ್ರವೃತ್ತಿ ಹೊಂದಿದೆ. ಆದ್ದರಿಂದ ಆಗಿಂದಾಗ್ಗೆ ಉರಿಯನ್ನು ಕೆದಕುತ್ತಿರುವುದು ಅಗತ್ಯ. ಸಸ್ಯಾಂಗಾರದ ನಿಕ್ಷೇಪಗಳು (ಮುಖ್ಯವಾಗಿ ಸಮಶೀತೋಷ್ಣ ವಾಯುಗುಣದಲ್ಲಿ) ಸಸ್ಯ ಪದಾರ್ಥಗಳು ಗಾಳಿಯ ಅಭಾವ ಪರಿಸ್ಥಿತಿಯಲ್ಲಿ ಶೇಖರವಾಗಿ ಅಂಶಭಾಗ ಕೊಳೆತು ಬ್ಯಾಕ್ಟೀಯಾದ ಚಟುವಟಿಕೆಯಿಂದ ರೂಪುಗೊಳ್ಳುತ್ತವೆ. ಈ ನಿಕ್ಷೇಪಗಳು ಭಾವೀ ಕಲ್ಲಿದ್ದಲಿನ ನಿಕ್ಷೇಪಗಳ ಪ್ರದೇಶಗಳು. ಇವು ಉತ್ತರ ಅಮೆರಿಕ, ರಷ್ಯ, ಸ್ವೀಡನ್, ಡೆನ್ಮಾರ್ಕ್, ಜರ್ಮನಿ ಮುಂತಾದ ದೇಶಗಳಲ್ಲಿವೆ.
3. ಲಿಗ್ನೈಟ್ (ಕಂದು ಕಲ್ಲಿದ್ದಲು) :  ಭೂವಿಜ್ಞಾನದ ಪ್ರಕಾರ ಇದು ಕಲ್ಲಿದ್ದಲಿಗಿಂತ ಈಚೆಗೆ ಭೂಗರ್ಭದಲ್ಲಿ ರೂಪಿತವಾದುದು. ಪೀಟ್ ಮತ್ತು ಬಿಟೂಮಿನ್ ನಡುವಣ ಸ್ಥಿತಿ ಲಿಗ್ನೈಟ್ ಎನ್ನಬಹುದು. ಇದರ ಜ್ವಾಲೆ ಸಾಕಷ್ಟು ಉದ್ದವಾಗಿರುವುದು. ಉಷ್ಣದಾಯಕ ಮೌಲ್ಯ ಕಿಲೋಗ್ರಾಮಿಗೆ 4000-6000 ಕ್ಯಾಲರಿಗಳು. ನಿತ್ಯಬಳಕೆಯಲ್ಲಿ, ಹಬೆ ಹಂಡೆಕಾಯಿಸಲು ಮತ್ತು ಕೈಗಾರಿಕಾ ಪ್ರಮಾಣದಲ್ಲಿ ಬಾಷ್ಪೀಕರಣಕ್ಕೆ ಇದರ ಉಪಯೋಗ ವಿಶೇಷವಾಗಿದೆ. ದಕ್ಷಿಣ ಭಾರತದಲ್ಲಿರುವ ನೈವೇಲಿ ನಿಕ್ಷೇಪದಿಂದ ಪ್ರತಿವರ್ಷ 5 ದಶಲಕ್ಷ ಟನ್‍ಗಳಷ್ಟು ಲಿಗ್ನೈಟ್ ಹೊರತೆಗೆಯಲಾಗುತ್ತಿದೆ. ಇದಲ್ಲದೆ ಕಾಶ್ಮೀರ ಮತ್ತು ಅಸ್ಸಾಂಗಳಲ್ಲಿಯೂ ಕಾಣಬರುತ್ತವೆ.
4. ಕಲ್ಲಿದ್ದಲು : ದೃಢ ಮತ್ತು ಭಿದುರ ಕಾರ್ಬನೇಶಿಯಸ್ ಶಿಲೆಗಳ ಸಾಮಾನ್ಯನಾಮ.  ಅತಿ ಮುಖ್ಯವಾದ ಘನ ಇಂಧನ.  ಭೂಗರ್ಭದಲ್ಲಿ ಸೇರಿಹೋದ ಪುರಾತನ ಸಸ್ಯಾವಶೇಷಗಳು ಅಲ್ಲಿನ ವಿಪರೀತ ಒತ್ತಡ ಮತ್ತು ಉಷ್ಣದ ಪರಿಣಾಮವಾಗಿ ಇಂದಿನ ಕಲ್ಲಿದ್ದಲ ಗಣಿಗಳಾಗಿವೆಯೆಂದು ಭಾವಿಸಲಾಗಿದೆ. ಕಲ್ಲಿದ್ದಲಿನಲ್ಲಿ ವಿವಿಧ ಜಾತಿಗಳಿವೆ.  ಬಿಟೂಮಿನ್, ಕ್ಯಾನಲ್ ಮತ್ತು ಆ್ಯಂಥ್ರಸೈಟ್ ಪ್ರಮುಖ ದರ್ಜೆಗಳು.  ಇದರ ಉಷ್ಣದಾಯಕ ಮೌಲ್ಯ ಕಿಲೋಗ್ರಾಮಿಗೆ 6,000 ಕ್ಯಾಲರಿಗಳು (ನೋಡಿ- ಕಲ್ಲಿದ್ದಲು) 
5. ಆಂಥ್ರಸೈಟ್ : ಬಲು ಗಡಸಾದ ಉತ್ಕøಷ್ಟ ಕಲ್ಲಿದ್ದಲು. ಇದರಲ್ಲಿರುವ ಹೈಡ್ರೊಜನ್ ಮತ್ತು ಇತರ ಬಾಷ್ಪಶೀಲ (ವೋಲಟೈಲ್) ವಸ್ತುಗಳ ಭಾಗ ಸ್ವಲ್ಪ. ಉಷ್ಣದಾಯಕ ಮೌಲ್ಯ ಕಿಲೋಗ್ರಾಮಿಗೆ 7500-8500 ಕ್ಯಾಲರಿಗಳು. ನೀರು, ಬೂದಿ ಕ್ಲೋರಿನ್ ಸಲ್ಫರ್ ಮತ್ತು ಫಾಸ್ಪರಸ್ ಸಂಯುಕ್ತಗಳು ಮುಖ್ಯ ಕಲ್ಮಶಗಳು. ಬೂದಿಯ ಅಂಶ ಹೆಚ್ಚಾಗಿರುವುದರಿಂದ ಕೆಲವು ಕೈಗಾರಿಕೆಗಳಲ್ಲಿ ಕಲ್ಲಿದ್ದಲ ಬಳಕೆ ನಿಷಿದ್ಧ.  
ಮೇಲೆ ಹೇಳಿದ ಇಂಧನಗಳ ರಾಸಾಯನಿಕ ಸಂಯೋಜನೆಯನ್ನು ಕೆಳಗಿನ ಕೋಷ್ಟಕ ಕ್ರೋಡೀಕರಿಸಿದೆ :  (ಸಂಖ್ಯೆಗಳು ಶೇಕಡಾವಾರು) : 

ಕಲ್ಲಿದ್ದಲಿನ ವಿಧ

ಇಂಗಾಲ

ಹೈಡ್ರೊಜನ್

ಆಕ್ಸಿಜನ್

ನೈಟ್ರೊಜನ್

ಸಲ್ಫರ್ 

ಬೂದಿ

ಸಸ್ಯಾಂಗಾರ (ಪೀಟ್) 

ಲಿಗ್ನೈಟ್ 

ಬಿಟೂಮಿನಸ್ ಕಲ್ಲಿದ್ದಲು 

ಆಂಥ್ರಸೈಟ್ 

 58.0

  67.0 

 77.0 

 90.0   

   6.3

  5.1

   5.0

   2.5 

 30.5 

 19.5 

  7.0 

  2.5

   0.9

   1.1 

   1.5    

   0.5 

ಛಾಯೆ 

 1.0 

 1.5 

 0.5 

 4.3 

 6.3

 8.0 

 4.0 

ಕೃತಕ ಇಂಧನಗಳು :  1. ಇದ್ದಲು : ಗ್ರಾಮಾಂತರಗಳಲ್ಲಿ ಇದ್ದಲು ತಯಾರಿಸುವ ವಿಧಾನ-ಮೊದಲು ಸೌದೆಯನ್ನು ಗೋಪುರವಾಗಿ ಪೇರಿಸುತ್ತಾರೆ.  ಗಾಳಿ ಸಂಚಾರಕ್ಕೆ ಅನುಕೂಲಿಸುವಂತೆ ರಾಶಿಯ ಮಧ್ಯ ಒಂದು ರಂಧ್ರವಿರುವುದು. ರಾಶಿಯ ಹೊರಮೈಯನ್ನು ಹುಲ್ಲಿನ ಹೆಪ್ಪಿನಿಂದ ಮುಚ್ಚಿ ತಳದಲ್ಲಿ ಬೆಂಕಿ ಮಾಡುವರು. ಆಗ ಸೌದೆ ವಿಭಜಿಸುವುದು. ಉತ್ಪತ್ತಿಯಾದ ಅನಿಲಗಳು ರಂಧ್ರದ ಮೇಲ್ಭಾಗದಲ್ಲಿ ಉಳಿಯುತ್ತವೆ. ಉರಿ ನೀಲಿ ಬಣ್ಣಕ್ಕೆ ತಿರುಗಿದಾಗ, ವಿಭಜನೆ ಜೀರ್ಣವಾಗುವುದು. ಆಗ ರಾಶಿಯನ್ನು ಮಣ್ಣಿನಿಂದ ಮುಚ್ಚಿ ಆರಲು ಬಿಡುವರು. ಬೆಂದಾಗ ಇದ್ದಲು ಸಿದ್ಧವಾಗಿರುತ್ತದೆ. ಕಾರ್ಖಾನೆಗಳಲ್ಲಾದರೆ ಮರದ ತುಂಡುಗಳನ್ನು ರಿಟಾರ್ಟುಗಳಲ್ಲಿಟ್ಟು ಗಾಳಿಯ ಸಂಪರ್ಕವಿಲ್ಲದಂತೆ ಹೊರಗಿನಿಂದ ಕಾಯಿಸುವರು. ಆಗ ಅಸಿಟಿಕ್ ಆಮ್ಲ, ಮಿಥೆನಾಲ್ ಮತ್ತು ಅಸಿಟೋನ್ ಇರುವ ಪೈರೋಲಿಗ್ನಿಯಸ್ ಆಮ್ಲ ಮುಖ್ಯವಸ್ತುವಾಗಿಯೂ ಇದ್ದಲು ಉಪವಸ್ತುವಾಗಿಯೂ ದೊರೆಯುವುವು. ಇದ್ದಲನ್ನು ಹೊತ್ತಿಸುವುದು ಸುಲಭ.  ಹೆಚ್ಚು ಹೊಗೆ ಕಾರದ ಸಣ್ಣ ಜ್ವಾಲೆಯಿಂದ ಉರಿಯುವುದು. ಇದರ ಉಷ್ಣದಾಯಕ ಮೌಲ್ಯ ಕಿಲೋಗ್ರಾಮಿಗೆ 6000-8000 ಕ್ಯಾಲರಿಗಳು, ಉನ್ನತ ದರ್ಜೆಯ ಕಬ್ಬಿಣ ಮತ್ತು ಉಕ್ಕಿನ ತಯಾರಿಕೆಯಲ್ಲಿ ಬಳಸುವರು. 
2. ಕೋಕ್ (ಕಲ್ಲಿದ್ದಲ ಕಿಟ್ಟ) : ಕಲ್ಲಿದ್ದಲನ್ನು ವಿನಾಶಕ ಬಾಷ್ಪ ಸಾಂದ್ರೀಕರಣಕ್ಕೆ ಒಳಪಡಿಸಿದಾಗ ಹೊಳೆಯುವ ಸರಂಧ್ರ ರಚನೆಯುಳ್ಳ ಪದಾರ್ಥ ಉಂಟಾಗುತ್ತದೆ. ಹೊಡೆದರೆ ಲೋಹಧ್ವನಿ ಕೊಡುತ್ತದೆ. ಇದರಲ್ಲಿ ಸಲ್ಫರ್ ಮತ್ತು ಬಾಷ್ಪಲ ವಸ್ತುಗಳು ಇಲ್ಲವೆಂದೇ ಹೇಳಬೇಕು. ಆದರೆ ಮೂಲ ಕಲ್ಲಿದ್ದಲಿನಲ್ಲಿದ್ದ ಬೂದಿಯಾಡುವ ಅಂಶಗಳು ಹೋಗಿರುವುದಿಲ್ಲ. ಹೊಗೆ ಕಾರದೆ ಸಣ್ಣದಾಗಿ ಉರಿಯುತ್ತದೆ.  ಇದರ ಉಷ್ಣದಾಯಕ ಮೌಲ್ಯ ಕಿಲೋಗ್ರಾಮಿಗೆ 7000-8000 ಕ್ಯಾಲರಿಗಳು.  
3. ಬ್ರೆಕೆಟ್ಟುಗಳು-ಕಲ್ಲಿದ್ದಲಿನ ದೂಳನ್ನು ಡಾಂಬರಿನೊಂದಿಗೆ ಕಲಸಿ ಒತ್ತಡದಿಂದ ಗಟ್ಟಿಸಿ ಮಾಡಿದ ಇಟ್ಟಿಗೆ.  ಸುಲಭವಾಗಿ ಪುಡಿಯಾಗುವ ಇಂಧನಗಳನ್ನು ಆರಿಸಲು ಇದೊಂದು ಉಪಾಯ. 

ಘನ ಇಂಧನಗಳ ಉಪಯುಕ್ತತೆ ಮತ್ತು ದೋಷ : ದ್ರವ ಮತ್ತು ಅನಿಲ ಇಂಧನಗಳಿಗಿಂತ ಇವು ಅಗ್ಗ.  ಉನ್ನತ ದಹನಬಿಂದುಗಳನ್ನು ಹೊಂದಿರುವುದರಿಂದ ಸುರಕ್ಷಿತವಾಗಿ ದಾಸ್ತಾನು ಮಾಡಬಹುದು. ಆದರೆ ಸಾಕಷ್ಟು ಮೇಲ್ಮೈ ಸಂಪರ್ಕದ ಅಭಾವದಿಂದ ಅವುಗಳಿಂದ ಪಡೆಯಬಹುದಾದ ಉಷ್ಣದ ಬಲುಭಾಗ ಸೋರಿ ಹೋಗುವುದು. ಕೆಂಡ, ಕಿಟ್ಟ ಇತ್ಯಾದಿಗಳೊಡನೆ ಇಂಧನದ ಅಧಿಕಾಂಶ ಗ್ರಹಿಸದೆ ಉಳಿದುಹೋಗುವುದು.  ತತ್ಫಲವಾಗಿ ಒಟ್ಟು ಉಷ್ಣದಾಯಕ ಮೌಲ್ಯದ ಕೇವಲ 15% ಭಾಗ ಮಾತ್ರ ಕಾರ್ಯಯೋಗ್ಯವಾಗಿರುವುದು. ಇವು ಘನ ಇಂಧನಗಳ ಪ್ರಮುಖ ದೋಷಗಳು.  

ಘನ ಇಂಧನವನ್ನು ಸದುಪಯೋಗವಾಗುವಂತೆ ಉರಿಸುವ ಬಗೆ :  ಇಂಧನವನ್ನು ಏರಿಸಿರುವ ಎತ್ತರಕ್ಕೆ ಅನುಗುಣವಾಗಿ ಅಗತ್ಯ ಪ್ರಮಾಣ ಗಾಳಿಯನ್ನು ಹಾಯಿಸಿ ಅದರಲ್ಲಿರುವ ಆಕ್ಸಿಜನ್ನೆಲ್ಲ ಖರ್ಚಾಗುವಂತೆ ಮಾಡಬೇಕು. ವಾಸ್ತವವಾಗಿ ಗಾಳಿ ನಿಯಂತ್ರಣ ಅಷ್ಟು ಸುಲಭಸಾಧ್ಯವಾದ ಕೆಲಸವಲ್ಲ.  ಹೆಚ್ಚು ಕಡಿಮೆಯಾಗುವುದೇ ಸಾಮಾನ್ಯ. ಗಾಳಿಯ ಪ್ರಮಾಣ ಕಡಿತವಾದಾಗ ವಿಷವಾಯುವಾದ ಇಂಗಾಲದ ಮಾನಾಕ್ಸೈಡು ಹುಟ್ಟುವುದು. ಎರಡರಲ್ಲಿ ಮೊದಲನೆಯದೇ ವಾಸಿ. ಆದ್ದರಿಂದ ಕೈಗಾರಿಕೆಯಲ್ಲಿ ಕುಲುಮೆಗಳನ್ನು ಕಾಯಿಸುವಾಗ ಅಗತ್ಯಪ್ರಮಾಣಕ್ಕಿಂತ ಎರಡುಪಟ್ಟು ಗಾಳಿಯನ್ನು ಉಪಯೋಗಿಸುವರು. ಯಾವುದೇ ಇಂಧನ ಉರಿದಾಗ ವಾಸನೆ ಹುಟ್ಟದಂತೆ ತಡೆಯುವುದು ಒಳಿತು. ಏಕೆಂದರೆ ಅದರಿಂದ ಸಾರ್ವಜನಿಕ ಆರೋಗ್ಯಕ್ಕೆ ಕುಂದು. ವಾತಾವರಣವನ್ನೆಲ್ಲ ಕಟುವಾಸನೆ ಮುತ್ತುತ್ತದೆ.  ಬಟ್ಟೆಯೂ ಕೆಡುವುದು. ಕಲ್ಲಿನ ಕಟ್ಟಡಗಳಿಗೂ ಹಾನಿಯಿದೆಯೆಂದು ತಿಳಿದಿದೆ.  
ನೈಸರ್ಗಿಕ ದ್ರವ ಇಂಧನಗಳು :  ಕೈಗಾರಿಕಾ ಮಹತ್ತ್ವವುಳ್ಳ ದ್ರವ ಇಂಧನಗಳಲ್ಲಿ ಪೆಟ್ರೋಲಿಯಂ ಪ್ಯಾರಫಿನ್ ತೈಲ ಮತ್ತು ಷೇಲ್ ಎಣ್ಣೆಗಳನ್ನು ಹೆಸರಿಸಬಹುದು. ಹೊಗೆ ಅಥವಾ ಕಾಡಿಗೆ ಹುಟ್ಟದಂತೆ ಪೆಟ್ರೋಲಿಯಮ್ಮನ್ನು ಎಡೆಬಿಡದೆ ಉರಿಸಬಹುದು.  ಆ್ಯಂಥ್ರಸೈಟಿನಷ್ಟು ಸ್ಥೂಲವಲ್ಲ ಮತ್ತು ಹೆಚ್ಚು ಪರಿಣಾಮಕಾರಿ. ಉಷ್ಣದಾಯಕ ಮೌಲ್ಯ ಒಂದು ಕಿಲೋಗ್ರಾಮಿಗೆ 11,000 ಕ್ಯಾಲರಿಗಳು.  ನೀಳ ಜ್ವಾಲೆ ಮತ್ತು ಅಧಿಕ ಉಷ್ಣತೆಯ ಅಗತ್ಯವಿರುವ ಎಲ್ಲ ಸನ್ನಿವೇಶಗಳಲ್ಲೂ ದ್ರವ ಸಾಧನಗಳಿಗೆ ಪ್ರಾಧಾನ್ಯವಿದೆ. ಅವನ್ನು ತುಂತುರು ರೂಪದಲ್ಲಿ ಉರಿಸುವುದು ವಾಡಿಕೆ. ಒಂದು ತುಂತುರು ಯಂತ್ರ (ಆಟೊಮೈಸರ್) ಇಂಧನವನ್ನು ಕುಲುಮೆಯೊಳಕ್ಕೆ ಎರಚುವುದು. ಅದರೊಡನೆ ಮಿತಿಮೀರಿ ಕಾಯಿಸಿದ ಹಬೆ ಅಥವಾ ಗಾಳಿಯನ್ನು ಬೆರೆಸಿ ಉರಿಸಲಾಗುವುದು.  ಉಷ್ಣನಷ್ಟವನ್ನು ಅತ್ಯಲ್ಪ ಮಟ್ಟಕ್ಕೆ ಸೀಮಿತಗೊಳಿಸಬಹುದು. ಪೆಟ್ರೋಲ್ ಬಳಸುವ ಅಂತರ್ದಹನ ಯಂತ್ರಗಳ ದಕ್ಷತೆ ಪರಮಾವಧಿ ಇರುವುದು ವ್ಯಕ್ತವಾಗಿದೆ. ದ್ರವ ಇಂಧನಗಳನ್ನು ಹೊತ್ತಿಸುವುದು ಸುಲಭ. ಬೂದಿ ಹುಟ್ಟುವ ಪ್ರಸಂಗವಿಲ್ಲ. ಯಾವ ಆಕಾರದ ಟ್ಯಾಂಕುಗಳಲ್ಲಿಯಾದರೂ ತುಂಬಿ ಸಾಗಿಸಬಹುದು. ಹಡಗಿನಲ್ಲಿ ಇತರ ಸಾಮಾನುಗಳನ್ನು ತುಂಬಲಾಗದ ಸ್ಥಳವನ್ನು ಈ ರೀತಿ ವಿನಿಯೋಗಿಸಬಹುದು. ಅಲ್ಲದೆ ಸಮಾನ ಉಷ್ಣದಾಯಕ ಮೌಲ್ಯವಿರುವ ಕಲ್ಲಿದ್ದಲಿಗಿಂತ 30% ರಷ್ಟು ಹಗುರವಾಗಿದ್ದು ಅರ್ಧದಷ್ಟು ಸ್ಥಳವನ್ನು ಮಾತ್ರ ಆಕ್ರಮಿಸುತ್ತದೆ. ಜ್ವಲನಬಿಂದು ಕಡಿಮೆಯಾಗಿರುವುದು ಒಂದು ಕೊರತೆ. ಇದರಿಂದ ದಾಸ್ತಾನು ಮತ್ತು ಸಾಗಾಣಿಕೆಯಲ್ಲಿ ತೊಡಕುಂಟಾಗಬಹುದು. ಆದರೆ ದ್ರವ ಇಂಧನಗಳಿಂದ ಆಗುವ ಪ್ರಯೋಜನಗಳನ್ನು ಗಮನಿಸಿದರೆ ಈ ತೊಂದರೆ ಮಹತ್ತ್ವದ್ದಲ್ಲ.  
ಪೆಟ್ರೋಲಿಯಂ ಜನ್ಯ ಇಂಧನಗಳು.  1. ಡಾಂಬರು (ಟಾರ್) : ಇದನ್ನು ದ್ರವರೂಪದಲ್ಲಿಡುವುದು ಕಷ್ಟ.  ಅಗತ್ಯವೆನಿಸಿದಾಗ ಕರಗಿಸಿ, ಜರಡಿಯಾಡಿಸಿ, ಕೋಕ್ ಒಲೆಯಿಂದ ಬರುವ ಅನಿಲದೊಂದಿಗೆ ಸೇರಿಸಿ ಉಪಯೋಗಿಸುವರು.  ಉಕ್ಕಿನ ತಯಾರಿಕೆಗಾಗಿ ನಿಯೋಜಿತವಾದ ತೆರೆದ ಕುಲುಮೆಗಳನ್ನು (ಓಪನ್ ಹಾರ್ತ್ ಫರ್ನೇಸ್) ಹೀಗೆ ಕಾಯಿಸುವುದುಂಟು. ಅದರ ಉಷ್ಣದಾಯಕ ಮೌಲ್ಯ ಒಂದು ಪೌಂಡಿಗೆ 15,000-16,500 ಃಖಿU. 

2. ಇಂಧನ ತೈಲಗಳು (ಫ್ಯುಯೆಲ್ ಆಯಿಲ್ಸ್) : ಇವುಗಳಲ್ಲಿ ಮುಖ್ಯವಾದುವುಗಳನ್ನು ಮುಂದೆ ಪಟ್ಟಿಮಾಡಿದೆ.  i.  ಬಾಷ್ಪಶೀಲ (ಬಾಷ್ಪಗುಣವಿರುವ) ಅಂಶಗಳು ಕನಿಷ್ಠ ಪ್ರಮಾಣದಲ್ಲಿರುವ ಕಚ್ಚಾ ಪೆಟ್ರೋಲಿಯಂ ಎಣ್ಣೆ.  ii. ಬಾಷ್ಟಶೀಲ ಅಂಶಗಳು ದಾಸ್ತಾನು ಮಾಡಿದಾಗ ಅಥವಾ ಸಾಗಾಣಿಕೆಯಲ್ಲಿ ನಷ್ಟವಾಗಿ ಉಳಿದ ಪೆಟ್ರೋಲಿಯಂ.  iii. ಸೀಮೆಎಣ್ಣೆಯ ಅನಂತರ ಮತ್ತು ಕೀಲೆಣ್ಣೆಯ ಮುನ್ನ ಸಾಂದ್ರೀಕರಿಸುವ ತೈಲ.  iv. ಪೆಟ್ರೋಲಿಯಂ ಶುದ್ಧೀಕರಣದಲ್ಲಿ ಉಳಿಯುವ ವಸ್ತು.  v. ಮೇಲ್ಕಂಡ ಎಣ್ಣೆಗಳ ಸೂಕ್ತ ಪ್ರಮಾಣಿತ ಮಿಶ್ರಣ.  ಇವುಗಳ ದಹನ, ಜಾಗ್ರತೆಯಾಗಿ ದಕ್ಷತೆಯಿಂದ ನಡೆಯಬೇಕಾದರೆ ಇವನ್ನು ತುಂತುರು ರೂಪದಲ್ಲಿ ವಿಶೇಷ ದೀವಿಗೆಗಳಲ್ಲಿ ಉರಿಸಬೇಕಾಗುತ್ತದೆ.  ಈ ಇಂಧನದ ಉಷ್ಣದಾಯಕ ಮೌಲ್ಯ ಪೌಂಡಿಗೆ 1,800-19,500 ಃಖಿU.                                                                              
3. ಸೀಮೆಎಣ್ಣೆ : ವಿದ್ಯುತ್ತಿನ ಬಳಕೆ ಸಾರ್ವತ್ರಿಕವಾಗುತ್ತಿರುವ ಈ ಕಾಲದಲ್ಲಿ ಇದರ ಪ್ರಾಶಸ್ತ್ಯ ತಗ್ಗಿದೆ. ಆದರೂ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಬೆಳಕನ್ನು ಪಡೆಯಲು ಉರುವಲಾಗಿ ಇದನ್ನು ಉಪಯೋಗಿಸುತ್ತಾರೆ. 
4. ಪೆಟ್ರೋಲ್ ಅಥವಾ ಗ್ಯಾಸೊಲಿನ್ :  ಪೆಟ್ರೋಲಿಯಂ ಅಂಶ ಬಾಷ್ಪೀಕರಣಕ್ಕೆ ಒಳಪಟ್ಟಾಗ ಸುಮಾರು 1750-2400 ಸೆ. ಉಷ್ಣತಾಮಿತಿಯಲ್ಲಿ ದೊರೆಯುವ ಇಂಧನ.  ಆಧುನಿಕ ಗ್ಯಾಸೊಲಿನ್ ಯಂತ್ರಗಳಲ್ಲಿ (ಎಂಜಿನ್ಸ್) ಬಳಸುವ ಪೆಟ್ರೋಲಿಗೆ ಈ ವಿಶಿಷ್ಟಗುಣಗಳಿರಬೇಕು : i. ಯಂತ್ರವನ್ನು ಸುಲಭವಾಗಿ ಚಲನಗೊಳಿಸಲು ಸಹಾಯಕವಾಗುವಷ್ಟು ಬಾಷ್ಪಗುಣವಿರಬೇಕು. ಬಾಷ್ಪಶೀಲತೆ ಹೆಚ್ಚಾಗಿರಲೂ ಕೂಡದು.  ಏಕೆಂದರೆ ಸಾಮಾನ್ಯ ಹವಾಗುಣದಲ್ಲಿಯೂ ಆವಿ ತೊಡರಿಕೊಂಡು ಯಂತ್ರಚಾಲನೆಗೆ ಅಡ್ಡಿಯಾಗಬಹುದು. ii. ಅಂಟುಗುಣವುಳ್ಳ ಮತ್ತು ತೀಕ್ಷ್ಣಸ್ವಭಾವದ ವಸ್ತುಗಳು ಮತ್ತು ಸಲ್ಫರಿನ ಭಾಗ ಕಡಿಮೆಯಿದ್ದಷ್ಟೂ ಉತ್ತಮ.  iii. ದಾಸ್ತಾನು ಮಾಡಿಟ್ಟ ಕಾಲದಲ್ಲಿ ಹೆಚ್ಚು ನಷ್ಟವಾಗಬಾರದು. iv. ಅಧಿಕ ಸಂಕೋಚ ಮತ್ತು ಅಂತರ್ದಹನ ಎಂಜಿನ್ನುಗಳಲ್ಲಿ ಬಳಸಲು ಅನುಕೂಲಿಸುವಂತೆ ಉತ್ತಮ ಅಂಟಿನಾಕ್ ಲಕ್ಷಣಗಳಿರಬೇಕು.  ಇದರ ನಿರ್ಣಯ ಮಾಡಲು ಆಕ್ಟೇನ್ ಸಂಖ್ಯೆ ಎಂಬ ಮಾನ ರೂಢಿಯಲ್ಲಿದೆ.  ಪೆಟ್ರೋಲಿನ ಉಷ್ಣದಾಯಕ ಮೌಲ್ಯ ಪೌಂಡಿಗೆ 19,000-20,500 ಃಖಿU.  ಅದರ ಆಕ್ಟೇನ್ ದರ್ಜೆಯನ್ನು ಸುಧಾರಿಸಲು ಲೆಡ್ ಟೆಟ್ರ ಈಥೈಲ್ ಮತ್ತು ಎಥಿಲೀನ್ ಡೈ ಬ್ರೋಮೈಡ್ ಮಿಶ್ರಣವನ್ನು ಸೇರಿಸುವುದು ಪದ್ಧತಿ; ಇಂಥ ಈಥೈಲ್ ಪೆಟ್ರೋಲ್ ಉರಿದಾಗ ಉಂಟಾದ ಲೆಡ್ ಬ್ರೋಮೈಡು ಯಂತ್ರದಿಂದ ಹೊರಬೀಳುವ ಅನಿಲಗಳೊಡನೆ ಪಾರಾಗುವುದು.  
ಕೃತಕ ದ್ರವ ಇಂಧನಗಳು : ಇದರಲ್ಲಿ ಆಲ್ಕೊಹಾಲ್ ಮುಖ್ಯವಾದುದು. ಇದನ್ನು ಹಲವಾರು ಮೂಲಗಳಿಂದ ಪಡೆಯಬಹುದು.  i. ಸಿದ್ಧ ಸಕ್ಕರೆಯಿರುವ ಕಾಕಂಬಿ ಮತ್ತು ದ್ರಾಕ್ಷಾರಸ;   ii. ಪಿಷ್ಟಾಂಶವಿರುವ ಧಾನ್ಯಗಳು ಮತ್ತು ಆಲೂಗೆಡ್ಡೆ : iii. ಸೆಲ್ಯುಲೋಸ್ ಇರುವ ಹುಲ್ಲು ಇತ್ಯಾದಿ; iv. ಎಥಿಲೀನ್ ಮತ್ತು ಅಸಿಟಲೀನ್ ಮುಂತಾದ ಅಪರ್ಯಾಪ್ತ ಹೈಡ್ರೋಕಾರ್ಬನ್ನುಗಳು.  
ನೈಸರ್ಗಿಕ ಶರ್ಕರ ಪಿಷ್ಟಾದಿಗಳಲ್ಲಿ, ಹೆಕ್ಸೋಸ್ (ಒಂದು ಅಣುವಿನಲ್ಲಿ ಅದು ಇಂಗಾಲದ ಪರಮಾಣುಗಳಿರುವ) ಸಕ್ಕರೆಗಳು ಮಾತ್ರ ಯೀಸ್ಟ್ ಸಸ್ಯದಲ್ಲಿರುವ ಸೈಮೇಸ್ ಕಿಣ್ವದ ಸಹಾಯದಿಂದ ಆಲ್ಕೊಹಾಲಿಗೆ ಪರಿವರ್ತಿತವಾಗಬಲ್ಲುವು.  ಆದ್ದರಿಂದ ಆಲೂಗೆಡ್ಡೆಯಲ್ಲಿರುವ ಪಿಷ್ಟವನ್ನು ಕಿಣ್ವಗಳ ಸಹಾಯದಿಂದ ಜಲ ವಿಶ್ಲೇಷಣೆ ಮಾಡಿ ಹೆಕ್ಸೋಸ್ ಸಕ್ಕರೆಗಳನ್ನಾಗಿ ಮಾಡಿಕೊಡುವುದು ಅಗತ್ಯ. 1912ರಲ್ಲಿಯೇ ಜರ್ಮನಿಯಲ್ಲಿ ಈ ರೀತಿ ಆಲ್ಕೂಹಾಲನ್ನು ತಯಾರಿಸುತ್ತಿದ್ದರೆಂಬುದು ಸ್ಮರಣೀಯ. ಸೆಲ್ಯುಲೋಸ್ ವಸ್ತುಗಳಲ್ಲಿ ಮರದ ಹೊಟ್ಟು ಮತ್ತು ಹಿಪ್ಪೆ ಆಲ್ಕೊಹಾಲ್ ತಯಾರಿಕೆಗೆ ಅನುವಾಗಬಲ್ಲವು. ಆದರೆ ಅವನ್ನು ಮೊದಲು ಒತ್ತಡದಿಂದ ಆಮ್ಲೀಯ ಮಾಧ್ಯಮದಲ್ಲಿ ಜಲವಿಶ್ಲೇಷಣೆಗೊಳಿಸಬೇಕಾಗುತ್ತದೆ. ಆಗ ದೊರೆತ ಹೆಕ್ಸೋಸ್ ಸಕ್ಕರೆಯನ್ನು ಯೀಸ್ಟಿನಿಂದ ಹುಳಿಸಿದರೆ ಆಲ್ಕೊಹಾಲ್ ಆಗುವುದು. ಕಾಗದದ ಪಲ್ಪ್ ತಯಾರಿಸಲು ಕ್ಯಾಲ್ಸಿಯಂ ಬೈಸಲ್ಫೇಟ್ ಬಳಸುವ ಕ್ರಮವೊಂದಿದೆ. ಆಗ ಪ್ರಾಸಂಗಿಕವಾಗಿ ಸೆಲ್ಯೂಲೋಸ್ ಹೆಕ್ಸೋಸ್ ಸಕ್ಕರೆಯಾಗುತ್ತದೆ. ಆದ್ದರಿಂದ ತಯಾರಿಕೆಯ ಕ್ರಮವನ್ನು ಸೂಕ್ತವಾಗಿ ಬಳಸಿಕೊಂಡರೆ ಕಾಗದದ ಕೈಗಾರಿಕೆಯಲ್ಲೂ ಆಲ್ಕೊಹಾಲನ್ನು ಉಪವಸ್ತುವಾಗಿ ಪಡೆಯುವ ಸಾಧ್ಯತೆಯಿದೆ. ಭಾರತದಲ್ಲಿ ಆಲ್ಕೊಹಾಲಿನ ತಯಾರಿಕೆಗೆ ಕಾಕಂಬಿಯೇ ಸೂಕ್ತ ಪದಾರ್ಥ. ಬೀಟ್ ಕಾಕಂಬಿಯಲ್ಲಿ ಕಬ್ಬಿನ ಕಾಕಂಬಿಗಿಂತ 20%ರಷ್ಟು ಹೆಚ್ಚು ಸಕ್ಕರೆಯಿದೆ. ಸಕ್ಕರೆ ಕಾರ್ಖಾನೆಯಿಂದ ಒದಗುವ ಕಾಕಂಬಿಯನ್ನು 10% ಜಲಮಿಶ್ರಿತ ದ್ರಾವಣದಿಂದ ಮಾಡಲಾಗುವುದು. ಇದನ್ನು ದೊಡ್ಡ ದೊಡ್ಡ ಕಡಾಯಿಗಳಲ್ಲಿಟ್ಟು ಯೀಸ್ಟ್ ಸೇರಿಸಿ ಉಷ್ಣತೆಯನ್ನು 320-380 ಸೆ. ಮಿತಿಯಲ್ಲಿ ನಿಯಂತ್ರಿಸುವರು. ಕ್ರಿಯೆಯಲ್ಲಿ ಉಷ್ಣ ಹೊರಬರುವುದರಿಂದ ತಣಿಸುವ ಸುರುಳಿಗಳ ಸಹಾಯದಿಂದ ಉಷ್ಣತೆ ಹೆಚ್ಚದಂತೆ ಎಚ್ಚರಿಕೆ ವಹಿಸಬೇಕು. ಲಭ್ಯವಾದ ದ್ರಾವಣದಲ್ಲಿ 8%-12% ಆಲ್ಕೊಹಾಲ್ ಇರುವುದು. ಅದನ್ನು ಸಾಂದ್ರೀಕರಿಸಲು ನಾನಾ ವಿಧಾನಗಳಿವೆ. ಅಂತರ್ದಹನ ಯಂತ್ರಗಳಲ್ಲಿ ಉಪಯೋಗಿಸುವ ಆಲ್ಕೊಹಾಲ್ 100% ರಷ್ಟು ಗುಣಮಟ್ಟದ್ದಾಗಿರಬೇಕು. ಸಾಮಾನ್ಯವಾಗಿ 80% ಪೆಟ್ರೋಲಿಯಂನೊಂದಿಗೆ 20% ಆಲ್ಕೊಹಾಲನ್ನು ಬಳಸುವುದಾದರೆ ಯಂತ್ರರಚನೆಯಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಹೇಳಿಕೊಳ್ಳುವಂಥ ಪೆಟ್ರೋಲಿಯಂ ನಿಕ್ಷೇಪಗಳಿಲ್ಲ. ಇತರ ದೇಶಗಳ ಪೆಟ್ರೋಲಿಯಂ ಸಂಗ್ರಹ ಸಹ ಕೇವಲ 50 ವರ್ಷಗಳಿಗೆ ಸಾಕಾಗುವಷ್ಟು ಮಾತ್ರ ಇದೆಯೆಂದು ಅಂದಾಜು. ಹೀಗಿರುವಾಗ ಭಾರತದಲ್ಲಿ ಕಾಕಂಬಿಯನ್ನು ಅವಲಂಬಿಸುವುದೇ ಲೇಸು. 
ಆಲ್ಕೊಹಾಲ್ ಇಂಧನದ ಅವಗುಣಗಳು :  i. ಗಣಿಯ ಬಳಿ ಪೆಟ್ರೋಲಿಯಂ ಬೆಲೆ ಎಷ್ಟಿರುವುದೂೀ ಅದರ ಎರಡರಷ್ಟು ಆಲ್ಕೊಹಾಲಿನದು.  ಆದ್ದರಿಂದ ಪೆಟ್ರೋಲಿಯಂ ಆಲ್ಕೊಹಾಲಿಗಿಂತ ಅಗ್ಗ.  ಆದರೆ ತೆರಿಗೆಯ ಹೊಂದಾಣಿಕೆಯಿಂದ ಆಲ್ಕೊಹಾಲೇ ಅಗ್ಗವಾಗಿ ದೊರೆಯವಂತೆ ಮಾಡಲು ಸಾಧ್ಯ.  ii.  ಆಲ್ಕೊಹಾಲನ್ನು ಉರುವಲಾಗಿ ಬಳಸುವ ಯಂತ್ರಗಳು ಚಳಿಗಾಲದಲ್ಲಿ ಸರಾಗವಾಗಿ ಕಾರ್ಯೋನ್ಮುಖವಾಗುವುದಿಲ್ಲ. iii.   ಆಲ್ಕೊಹಾಲಿನ ಉಷ್ಣದಾಯಕ ಮೌಲ್ಯ ಕಿ.ಗ್ರಾಂಗೆ 6,500 ಕ್ಯಾಲರಿಗಳಾದರೆ, ಪೆಟ್ರೋಲಿಯಂನ ಉಷ್ಣದಾಯಕ ಮೌಲ್ಯ ಕಿ.ಗ್ರಾಂಗೆ 11,500 ಕ್ಯಾಲರಿಗಳು. iv.  ಗಾಳಿಯೊಡನೆ ಬೆರೆತ ಆಲ್ಕೊಹಾಲಿನ ಆವಿ, ಕೆಲವು ವೇಳೆ ಆಸ್ಫೋಟಿಸುವುದುಂಟು. 
ಆಲ್ಕೊಹಾಲ್ ಇಂಧನದ ಪ್ರಯೋಜನಗಳನ್ನು ಗಮನಿಸಿದರೆ ಈ ಅವಗುಣಗಳು ಅಷ್ಟೊಂದು ಗಮನಾರ್ಹವಲ್ಲ.  i. ಅದರ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳಿಗೆ ಎಂದೂ ಅಭಾವವಿಲ್ಲ. ii. ಅದನ್ನು ದಾಸ್ತಾನು ಮಾಡಿ ಸಾಗಿಸುವುದು ಸುಲಭ.  iii. ಅದರಿಂದ ಹುಟ್ಟುವ ಬೆಂಕಿಯನ್ನು ಬಲುಬೇಗ ಆರಿಸಬಹುದು. iv. ಅದರ ದಹನ ದಕ್ಷತೆ ಹೆಚ್ಚು.  ಆದ್ದರಿಂದ ಅಧಿಕ ಸಂಮರ್ದ ಪ್ರಮಾಣ (ಕಂಪ್ರೆಸನ್ ರೇಶಿಯೊ) ಸಾಧ್ಯ.  v  ಯಂತ್ರಗಳ ಸವೆತ ಕಡಿಮೆ.  vi  ಸ್ವಲ್ಪ ಈಥರ್ ಮತ್ತು ಅಸಿಟೋನ್ ಸೇರಿಸುವುದರಿಂದ ಆಲ್ಕೊಹಾಲಿನ ಕೆಲವು ಲೋಪಗಳನ್ನು ತಿದ್ದಬಹುದು.  ಈ ಎಲ್ಲ ಕಾರಣಗಳಿಂದ ಪೆಟ್ರೋಲ್ ಆಲ್ಕೊಹಾಲ್ ಮಿಶ್ರಣ ಜನಪ್ರಿಯತೆ ಗಳಿಸುತ್ತಿದೆ. 
ಕೃತಕ ಪೆಟ್ರೋಲಿನ ತಯಾರಿಕೆ.  1. ಬರ್ಜಿಯಸ್ ವಿಧಾನ : ಇಲ್ಲಿ ಕಲ್ಲಿದ್ದಲು ಹೈಡ್ರೊಜನ್ನನ್ನು ಹೀರುವಂತೆ ಮಾಡಿ ಪೆಟ್ರೋಲನ್ನು ಹೋಲುವ ದ್ರವವನ್ನು ತಯಾರಿಸಲಾಗುವುದು.  ಕಲ್ಲಿದ್ದಲ ಪುಡಿಯನ್ನು 40% ಡಾಂಬರು ಅಥವಾ ಸದೃಶ ಪದಾರ್ಥದೊಡನೆ ಕಲಸಿದರೆ ಸರಿ (ಪೇಸ್ಸ್) ಉಂಟಾಗುವುದು.  ಇದನ್ನು ಒತ್ತಡ ಕಡಾಯಿಯಲ್ಲಿಟ್ಟು (ಆಟೋಕ್ಲೇವ್) ಉಷ್ಣತೆಯನ್ನು 4500 ಸೆ.ನಲ್ಲಿ ನಿಯಂತ್ರಿಸಿ 200 ವಾಯುಭಾರ (ಅಟ್‍ಮಾಸ್ಪಿಯರ್) ಸಂಮರ್ದದಲ್ಲಿ ಹೈಡ್ರೊಜನ್ನನ್ನು ಹಾಯಿಸಲಾಗುವುದು.  ಉಪಯೋಗಿಸುವ ವೇಗವರ್ಧನ ಮಿಶ್ರಣದಲ್ಲಿ ಮುಖ್ಯವಾಗಿ ಜಲಯುಕ್ತ ಕಬ್ಬಿಣದ ಆಕ್ಸೈಡ್ ಇರುತ್ತದೆ.  ಅದಕ್ಕೆ ಲಕ್ಸ್‍ಮಾಸ್ ಎಂದು ಹೆಸರು.  ಹೈಡ್ರೊಜನ್ ಅಂಶ ಕಡಿಮೆಯಾಗಿರುವ ಆಂಥ್ರಸೈಟ್ ಅನಿಲ ಹೀರಲು ತಕರಾರು ಮಾಡುತ್ತದೆ.  ಆಗ ಪೆಟ್ರೋಲಿನಂತಿರುವ ದ್ರವವಸ್ತು ದೊರೆಯುವುದು.  ಉಳಿದ ಸಾಂದ್ರತೈಲವನ್ನು ಮತ್ತೆ ಬಳಸಿಕೊಂಡು ವಿಧಾನ ಅವ್ಯಾಹತವಾಗಿ ನಡೆಯುವಂತೆ ಏರ್ಪಡಿಸಬಹುದು.  3.5 ಟನ್ ಕಲ್ಲಿದ್ದಲಿನಿಂದ 1 ಟನ್ ಪೆಟ್ರೋಲು ಸಿಗುತ್ತದೆ.  
2. ಜಲಾನಿಲದಿಂದ : ಜಲಾನಿಲದಲ್ಲಿ ಪ್ರಧಾನವಾಗಿ ಇಂಗಾಲದ ಮಾನಾಕ್ಸೈಡ್ ಮತ್ತು ಹೈಡ್ರೊಜನ್, ಅಲ್ಪ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ನೈಟ್ರೊಜನ್ ಇವೆ.  ಜರ್ಮನಿಯಲ್ಲಿ ಜಲಾನಿಲದಿಂದ ಮಿಥೆನಾಲ್ ತಯಾರಿಸಲು ಒಂದು ವಿಧಾನ ಶೋಧಿಸಿದರು (1925).  ಅಲ್ಲಿಯವರೆಗೆ ಸೌದೆಯ ವಿನಾಶಕ ಬಾಷ್ಪ ಸಾಂದ್ರೀಕರಣದಿಂದ ಅಮೆರಿಕ ಅಗತ್ಯವಾದ ಮಿಥೆನಾಲನ್ನು ತಯಾರಿಸುತ್ತಿತ್ತು.  ಜರ್ಮನಿಯ ಅಗ್ಗದ ಉತ್ಪನ್ನ ಅಮೆರಿಕದ ಮಾರುಕಟ್ಟೆಯನ್ನು ಏರುಪೇರು ಮಾಡಿತೆನ್ನಬೇಕು.  ಜಲಾನಿಲದೊಡನೆ ಜಲಹೈಡ್ರೊಜನ್ನನ್ನು ಬೆರೆಸಿ ಸತು ಮತ್ತು ತಾಮ್ರದ ಆಕ್ಸೈಡುಗಳ ವೇಗವರ್ಧಕ ಮಿಶ್ರಣದ ಮೇಲೆ ನಿರ್ದಿಷ್ಟ ಸಂಮರ್ದ ಮತ್ತು ಉಷ್ಣತೆಯಲ್ಲಿ ಹಾಯಿಸಿದರೆ ಮಿಥೆನಾಲ್ ಉಂಟಾಗುವುದು.  ಕೆಲವು ವರ್ಷಗಳ ಅನಂತರ ಫಿಷರ್ ಮತ್ತು ಟ್ರೋಪ್ ಜಲಾನಿಲದಿಂದ ವರಿಷ್ಠ ಆಲ್ಕೊಹಾಲುಗಳನ್ನು ಸೃಷ್ಟಿಸುವ ವಿಧಾನವನ್ನು ಏಕಕಾಲದಲ್ಲಿ ಪ್ರಚುರಪಡಿಸಿದರು. ಸಂಶೋಧನೆಯ ತರುಣದಲ್ಲಿ ಹೈಡ್ರೊಕಾರ್ಬನ್ನುಗಳು, ಆಲ್ಕೊಹಾಲುಗಳು, ಆಲ್ಡಿಹೈಡುಗಳು, ಕೀಟೋನುಗಳು, ಆಮ್ಲಗಳು ಮತ್ತು ಎಷ್ಟರುಗಳ ಮಿಶ್ರಣ ಬಂದು ತೊಂದರೆಯಾಯಿತು.  ಕ್ರಮೇಣ ಮೀಥೇನ್ ಮತ್ತು ಇತರ ಅನಪೇಕ್ಷಿತ ವಸ್ತುಗಳ ಉತ್ಪತ್ತಿಯನ್ನು ತಡೆಗಟ್ಟುವ ಕ್ರಮ ಬಳಕೆಗೆ ಬಂತು.  ಇದಕ್ಕಾಗಿ ಮಾಡಿದ ಸುಧಾರಣೆಗಳ ವಿವರ ಹೀಗಿದೆ :  
 i. ಕೋಬಾಲ್ಟ್-ತಾಮ್ರ-ಮ್ಯಾಂಗನೀಸ್ ಆಕ್ಸೈಡುಗಳ ವೇಗವರ್ಧಕ ಮಿಶ್ರಣ. ii.  4000-5000 ಸೆ. ಮಿತಿಯಲ್ಲಿ ಉಷ್ಣತೆಯ ನಿಯಂತ್ರಣ. iii.   150 ವಾಯುಭಾರ ಸಂಮರ್ದ.  
ಒಂದು ಘನ ಮೀಟರ್ ಜಲಾನಿಲದಿಂದ 100 ಗ್ರಾಂ ಹೈಡ್ರೊಕಾರ್ಬನ್ನುಗಳು ಸಿದ್ಧಿಸುತ್ತವೆ. ಅವುಗಳಲ್ಲಿ ಅರ್ಧಭಾಗ ದ್ರವರೂಪದಲ್ಲೂ ಉಳಿದರ್ಧ ಘನ ರೂಪದಲ್ಲೂ ಇರುತ್ತವೆ. ಅಂದರೆ 50% ಪರಿವರ್ತನೆ ಸಾಧಿಸಿದಂತಾಯಿತು. ಈ ಕ್ರಿಯೆಯನ್ನು ಕೆಳಕಂಡ ಸಮೀಕರಣದಿಂದ ಸೂಚಿಸಬಹುದು.  
                   ಟಿಅಔ+(2ಟಿ+1)ಊ2(ಟಿ ಊ2ಔ+ಅಟಿಊ2ಟಿ+2

	3. ಬಹ್ವಂಗೀಕರಣ (ಪಾಲಿಮೈಸೇಷನ್) : ನೈಸರ್ಗಿಕ ಅನಿಲ ಮತ್ತು ವಿಭಜನ ವಿಧಾನಗಳಿಂದ ದೊರೆತ ಸಣ್ಣ ಹೈಡ್ರೊಕಾರ್ಬನ್ನುಗಳು ಸೂಕ್ತ ವೇಗವರ್ಧಕಗಳ ನೆರವಿನಿಂದ ಒಟ್ಟುಗೂಡಿ ಪೆಟ್ರೋಲಿಯಂ ಹೈಡ್ರೊಕಾರ್ಬನ್ನುಗಳನ್ನು ಕೊಡುತ್ತವೆ.  ಬಂದ ಪೆಟ್ರೋಲಿನಲ್ಲಿ ಆಕ್ಟೇನ್ ಪ್ರಮಾಣ ಅಧಿಕ.  ಅಮೆರಿಕದ ಪೆಟ್ರೋಲಿನ ಬಹ್ವಂಶ ಹೀಗೆ ಸರಬರಾಜಾಗುತ್ತಿದೆ.  
4. ವಿಭಜನ ವಿಧಾನ (ಕ್ರೇಕಿಂಗ್) :  ಸಾಂದ್ರತೈಲದ ಆವಿಯನ್ನು ನಿರ್ದಿಷ್ಟ ವೇಗವರ್ಧಕಗಳ ಸಂಪರ್ಕದಲ್ಲಿ ಅಧಿಕ ಉಷ್ಣಕ್ಕೆ ಒಡ್ಡಿದರೆ ಅದರಲ್ಲಿರುವ ದೊಡ್ಡ ಹೈಡ್ರೊಕಾರ್ಬನ್ ಅಣುಗಳು ಒಡೆದು ಪೆಟ್ರೋಲಿನಲ್ಲಿರುವ ಸಣ್ಣ ಹೈಡ್ರೊಕಾರ್ಬನ್ನಿನ ಅಣುಗಳಾಗುತ್ತವೆ.  ಪ್ರಪಂಚದ ಪೆಟ್ರೋಲಿನ ಬೇಡಿಕೆಯ ಬಹುಭಾಗ ಈ ರೀತಿ ಪೂರೈಕೆಯಾಗುತ್ತಿದೆ.  
5. ಕಲಾಯ್ಡಲ್ ಇಂಧನ :  ಕಲ್ಲಿದ್ದಲು, ಪೀಟ್, ಕೋಕ್ ಅಥವಾ ಮರವನ್ನು ನುಣ್ಣಗೆ ಪುಡಿಮಾಡಬೇಕು.  85% ಭಾಗ ಪುಡಿ 200 ಅಳತೆಯ (ಸೈಜ್) ಜರಡಿಯಲ್ಲಿ ಹಾದು ಹೋಗುವಂತಿರಬೇಕು. ಅದನ್ನು ರಾಳ ಮತ್ತು ಎಣ್ಣೆಯೊಡನೆ ಮಿಳಿತಮಾಡಿ ಬಾಲ್‍ಗಿರಣಿಯಲ್ಲಿ ಅರೆದರೆ ಕಲಾಯ್ಡ್ ಸ್ಥಿತಿಗೆ ಬರುವುದು. 30% ಕಲ್ಲಿದ್ದಲು ಇರುವ ಕಲಾಯ್ಡಲ್ ಇಂಧನದ ಉಷ್ಣದಾಯಕ ಮೌಲ್ಯ ಪೌಂಡಿಗೆ 17,000 ಃಖಿU. ಎಣ್ಣೆಯಿಂದ ಉರಿಯುವ ಯಾವ ಒಲೆಯಲ್ಲಾದರೂ ಇದನ್ನು ಉಪಯೋಗಿಸಬಹುದು. 
ಪ್ರಕೃತಿದತ್ತ ಅನಿಲ ಇಂಧನಗಳು : ಈ ವರ್ಗದ ಉರುವಲುಗಳಲ್ಲಿ ನೈಸರ್ಗಿಕ ಅನಿಲ ಮುಖ್ಯವಾದುದು.  ಕಲ್ಲಿದ್ದಲು ಗಣಿಗಳ ಮತ್ತು ಪೆಟ್ರೋಲಿಯಂ ನಿಕ್ಷೇಪಗಳ ಸಮೀಪದಲ್ಲಿ ಇದು ದೊರೆಯುತ್ತದೆ.  ಸ್ಥಳೀಯವಾಗಿ ಕೈಗಾರಿಕೆಗಳಲ್ಲಿ ಅಥವಾ ಗೃಹಬಳಕೆಗೆ ಇದು ವಿಲೆಯಾಗುತ್ತದೆ. ಮೀಥೇನ್, ಈಥೇನ್ ಮತ್ತು ಇತರ ಅನಿಲರೂಪದ ಹೈಡ್ರೊಕಾರ್ಬನ್ನುಗಳು ಇದರಲ್ಲಿರುವ ಮುಖ್ಯಾಂಶಗಳು.  ಅದರೊಡನೆ ದ್ರವರೂಪದ ವಸ್ತುಗಳು ಸೇರಿರುತ್ತವೆ. ಇವನ್ನು ವಿಭಜಿಸಿ ನೈಸರ್ಗಿಕ ಅನಿಲಕ್ಕೆ ಬದಲಿ ವಸ್ತುಗಳು ತಯಾರಿಸುವುದು ಈಚೆಗೆ ಆರಂಭವಾಗಿದೆ. ಹತ್ತಿರದ ಸ್ಥಳಗಳಿಗೆ ಕೊಳಾಯಿ ಮೂಲಕ ಮತ್ತು ದೂರದ ನಗರಗಳಿಗೆ ದ್ರವರೂಪದಲ್ಲಿ ಸಿಲಿಂಡರುಗಳಲ್ಲಿಟ್ಟು ರವಾನಿಸುವರು.  
ಕೃತಕ ಅನಿಲ ಇಂಧನಗಳು :  ನೈಸರ್ಗಿಕ ಅನಿಲವೊಂದೇ ಪ್ರಕೃತಿದತ್ತ ಉರುವಲು. ಬಳಕೆಯಲ್ಲಿರುವ ಇತರ ಇಂಧನಗಳೆಲ್ಲ ಕೃತಕವಾಗಿ ತಯಾರಾದವು.  ಅವುಗಳಲ್ಲಿ ಮುಖ್ಯವಾದುವನ್ನು ಮುಂದೆ ವಿವರಿಸಲಾಗಿದೆ. 
1. ಕಲ್ಲಿದ್ದಲ ಅನಿಲ (ಕೋಲ್ ಗ್ಯಾಸ್) : ಕಲ್ಲಿದ್ದಲನ್ನು ವಿನಾಶಕ ಬಾಷ್ಪ ಸಾಂದ್ರೀಕರಣಕ್ಕೆ ಒಳಪಡಿಸಿದಾಗ ಕೆಳಕಂಡ ವಸ್ತುಗಳು ದೊರೆಯುತ್ತವೆ.  
i. ಕಲ್ಲಿದ್ದಲ ಅನಿಲ, ಇದರ ಸರಾಸರಿ ಅಂಗಾಂಶಗಳನ್ನು ಕೆಳಗೆ ಕೊಡಲಾಗಿದೆ.                                              
    
 ಶೇಕಡಾ 

ಹೈಡ್ರೊಜನ್                                           40-50

ಮೀಥೇನ್                                            30-35

ನೈಟ್ರೊಜನ್                                             6-8

ಇಂಗಾಲದ ಮಾನಾಕ್ಸೈಡ್                                   5-10
ಎಥಿಲೀನ್, ಅಸಿಟಲೀನ್ 			

   ಬೆಂಜಿóೀನ್ ಇತ್ಯಾದಿ                                     2-4
ಇಂಗಾಲದ ಡೈಆಕ್ಸೈಡ್                                     1-3
I.  ಡಾಂಬರು  (ಕೋಲ್‍ಟಾರ್) :  ದ್ರವ ಉತ್ಪನ್ನವನ್ನು ತಣಿಸಿದಾಗ ಅದು ಎರಡು ಪದರಗಳಾಗಿ ನಿಲ್ಲುವುದು. ಮೇಲಿನ ಜಲಯುಕ್ತ ದ್ರಾವಣದಲ್ಲಿ ಅಮೋನಿಯ, ಅಮೋನಿಯಂ ಕಾರ್ಬೊನೇಟ್, ಸಲ್ಫೇಟ್, ಸಯನೈಡ್ ಮತ್ತು ಸಲ್ಫೊಸಯನೈಡುಗಳಿರುವುದರಿಂದ ಅದಕ್ಕೆ ಅಮೋನಿಯಾಕಲ್ ಲಿಕ್ಕರ್ ಎಂದು ಹೆಸರು. ತಳದ ಪದರವೇ ಡಾಂಬರು, ಬೆಂಜಿûೀನ್, ಟಾಲೀನ್, ನ್ಯಾಫ್ತಲೀನ್, ಆಂಥ್ರಸೀನ್, ಪಿರಡಿನ್ ಫೀನಾಲುಗಳು ಇತ್ಯಾದಿ ಆರೋಮ್ಯಾಟಿಕ್ ಸಂಯುಕ್ತಗಳ ಸಂಕೀರ್ಣ ಮಿಶ್ರಣವಿದು.  
II ಕೋಕ್ : ರಿಟಾರ್ಟಿನಲ್ಲಿ ಉಳಿಯುವ ಇಂಗಾಲೀಯ ಶೇಷವಸ್ತು, 10000 ಸೆ.ನಲ್ಲಿ ಒಂದು ಟನ್ ಕಲ್ಲಿದ್ದಲಿನಿಂದ ಲಭಿಸುವ ವಸ್ತುಗಳ ಪ್ರಮಾಣವನ್ನು ಕೆಳಗೆ ಕೊಡಲಾಗಿದೆ.  

              ಅನಿಲ                              380 ಪೌಂಡುಗಳು

              ಡಾಂಬರು                           115     “

              ದ್ರವ                               177     “

              ಕೋಕ್                             1,568     “
ಕಲ್ಲಿದ್ದಲ ಅನಿಲವನ್ನು ಉತ್ಪಾದಿಸಲು ಉಪಯೋಗಿಸುವ ಆಧುನಿಕ ಯಂತ್ರೋಪಕರಣದ ವಿವರಗಳನ್ನು ಚಿತ್ರ 1ರಲ್ಲಿ ಕಾಣಬಹುದು.  ಉಷ್ಣನಿರೋಧಕ ಮಣ್ಣಿನಿಂದ ಮಾಡಿದ ರಿಟಾರ್ಟುಗಳು (ಖಖ) ಭದ್ರವಾದ ಇಟ್ಟಿಗೆಯ ಅಡಿಪಾಯದ ಮೇಲೆ ನಿಂತಿವೆ. ಉತ್ಪನ್ನವಾದ ಕೋಕ್ ಬಳಸಿದ ಕಲ್ಲಿದ್ದಲಿಗಿಂತ ಹೆಚ್ಚು ಸ್ಥಳ ಆಕ್ರಮಿಸಿಕೊಳ್ಳುವುದರಿಂದ ರಿಟಾರ್ಟುಗಳು ಬುಡದಲ್ಲಿ ವಿಶಾಲವಾಗಿದ್ದು ಮೇಲೇರಿದಂತೆ ಕಿರಿದಾಗುವುವು. ವಾಯುಭದ್ರವಾದ (ಗ್ಯಾಸ್ ಟೈಟ್) ಬಾಯಿಯ (ಊ) ಮೂಲಕ ಕಲ್ಲಿದ್ದಲನ್ನು ಸೇರಿಸಲಾಗುವುದು. ಉತ್ಪತ್ತಿಯಾದ ಬಿಸಿ ಕೋಕ್, ಉದ್ದ ಕವಾಟಗಳಲ್ಲಿ (ಗಿಗಿ) (ಎಕ್ಸ್‍ಟ್ರ್ಯಾಕ್ಟರ್ ವಾಲ್ವ್ಸ್) ಶೇಖರಿಸುವುದು. ಅಲ್ಲಿ ಅನಂತರ ಟ್ರಕ್ಕುಗಳಲ್ಲಿ ಸಾಗಿಸಲಾಗುವುದು.  ಇಂಥ ಲಂಬ ರಿಟಾರ್ಟುಗಳ ಬಳಕೆಯಿಂದ ವಿಧಾನ ಸತತವಾಗಿ ನಡೆಯುವಂತಾಗಿದೆ. 

ಚಿತ್ರ-1

ಪ್ರೊಡ್ಯೊಸರ್ ಅನಿಲ ಮತ್ತು ಗಾಳಿಯ ಮಿಶ್ರಣವನ್ನು ಉರಿಸುವುದರಿಂದ ರಿಟಾರ್ಟುಗಳನ್ನು 10000 ಸೆ.ನಲ್ಲಿಡಬಹುದು. ಪುನಶ್ಚೇತನ ಉಷ್ಣ ಉಳಿತಾಯ ವ್ಯವಸ್ಥೆಗೆ (ರೀಜನರೇಟಿವ್ ಸಿಸ್ಟಂ ಆಫ್ ಹೀಟ್ ಎಕಾನಮಿ) ಅನುಸಾರವಾಗಿ ಇದು ನಡೆಯುವುದು.  ಬಿಸಿ ಉರಿಯನ್ನು ರಿಟಾರ್ಟುಗಳ ಸುತ್ತ ಹಾಯಿಸಲು ಈ ಗವಾಕ್ಷಿ ಸಹಾಯಕವಾಗಿದೆ.  ರಿಟಾರ್ಟುಗಳ ಸುತ್ತ ಕಲ್ಲಿದ್ದಲು ಕೆಳಗಿಳಿದಂತೆ ಕ್ರಮೇಣವಾಗಿ ವಿಭಜನೆ ಹೊಂದುತ್ತ ಹೋಗುವುದು. ಬಾಷ್ಪಶೀಲ ಉತ್ಪನ್ನಗಳು, ರಿಟಾರ್ಟಿನ ಮೇಲ್ಭಾಗದಿಂದ ಹೈಡ್ರಾಲಿಕ್ ಮೇನ್ ಪ್ರವೇಶಿಸುವುವು. ಇಲ್ಲಿ ಡಾಂಬರು ಮತ್ತು ಅಮೋನಿಯಾಕಲ್ ಲಿಕ್ಕರ್ ಶೇಖರವಾಗುತ್ತವೆ.  ಹೈಡ್ರಾಲಿಕ್ ಮೇನಿನ ಉಷ್ಣತೆ 600 ಸೆ. ಮೀರಿರುವುದಿಲ್ಲ. ಸಾಂದ್ರೀಕರಿಸಿದ ದ್ರವದ ಮಟ್ಟ ನಿಯಂತ್ರಿತವಾಗಿರುವುದು. ಹೆಚ್ಚಾದ ದ್ರವ ಬುಡದಲ್ಲಿರುವ ಡಾಂಬರು ಗುಂಡಿಗೆ ಹರಿದುಹೋಗುವುದು. ಹೈಡ್ರಾಲಿಕ್ ಮೇನಿನಿಂದ ಅನಿಲಗಳು ಕೊಳವೆ ಸಾಂದ್ರಕಗಳನ್ನು ತಲಪುತ್ತವೆ. ಇಲ್ಲಿ ತಣಿದು ವಾಯುಮಂಡಲದ ಉಷ್ಣತೆಯನ್ನು ಹೊಂದುವುವು. ಬುಡದಲ್ಲಿ ಸಂಗ್ರಹವಾಗುವ ದ್ರವ ಯಂತ್ರೋಪಕರಣದ ವಿವಿಧ ಭಾಗಗಳ ಸಂಪರ್ಕವನ್ನು ಕಡಿದುಹಾಕುತ್ತದೆ. ಅನಿಲಗಳು ಸಾಂದ್ರಕದಲ್ಲಿ ಪದೇ ಪದೇ ಬಳಸಿ ಬರಲು ಇದು ಸಹಕಾರಿ. ಸಾಂದ್ರಕದಿಂದ ಅನಿಲಗಳು ನಿಷ್ಕಾಸಕವನ್ನು (ಇ) (ಎಗ್¸óÁಸ್ಟರ್) ಹೋಗುತ್ತವೆ. ರಿಟಾರ್ಟುಗಳಲ್ಲಿ ಒತ್ತಡವನ್ನು ಆದಷ್ಟು ಕೆಳಮಟ್ಟದಲ್ಲಿಡಲು ಅನಿಲಗಳು ಸೋರಿ ಹೋಗದಂತೆ ನೋಡಿಕೊಳ್ಳಲು ಮತ್ತು ಮಾರ್ಜಕಶುದ್ಧೀಕರಣ ವಿಭಾಗಕ್ಕೆ ಅವುಗಳನ್ನು ಸೆಳೆಯಲು ಇದು ಸಹಾಯಕವಾಗಿದೆ. ತಮ್ಮ ಅಂಚಿನ ಮೇಲೆ ಕೂರಿಸಲಾಗಿರುವ ಹಲಗೆಗಳಿಂದ ಮಾರ್ಜಕ ಸಜ್ಚಾಗಿರುತ್ತದೆ. ಇಲ್ಲಿ ಪ್ರತಿಪ್ರವಾಹತತ್ತ್ವದ (ಕೌಂಟರ್ ಕರೆಂಟ್ ಪ್ರಿನ್ಸಿಪಲ್) ಪ್ರಕಾರ ನೀರು ಹಾಯಿಸಿ ಅಮೋನಿಯ ಅಂಶವನ್ನು ನಿವಾರಿಸಲಾಗುವುದು. ಮಾರ್ಜಕದ ಬುಡದಲ್ಲಿ ಶೇಖರಿಸುವ ದ್ರಾವಣದಲ್ಲಿ 2%ರಷ್ಟು ಅಮೋನಿಯ ಇರುವುದು. ಇದರಿಂದ ಅಮೋನಿಯಂ ಸಲ್ಫೇಟನ್ನು ಮಾಡುವರು.  ಮಾರ್ಜಕದಿಂದ ಅನಿಲಗಳು ಶುದ್ಧೀಕರಣ ವಿಭಾಗವನ್ನು ಸೇರುವುವು. ಇಲ್ಲಿ ತಟ್ಟೆಗಳಲ್ಲಿ ತೇವವಾದ ಸುಣ್ಣ ಅಥವಾ ಫೆರಿಕ್ ಹೈಡ್ರಾಕ್ಸೈಡ್ ಇಟ್ಟಿರುತ್ತಾರೆ.  ಶುದ್ಧಿಗೊಂಡ ಅನಿಲ ಸಂಗ್ರಾಹಕಗಳಿಗೆ ತುಂಬಿಕೊಳ್ಳುವುದು, ಅಲ್ಲಿಂದ ಪ್ರಧಾನ ಕೊಳಾಯಿಗಳ ಮೂಲಕ ಉಪಯೋಗಿಸುವ ನಿವೇಶನಕ್ಕೆ ಒಯ್ಯಲಾಗುವುದು.  
1. ಜಲಾನಿಲ (ವಾಟರ್ ಗ್ಯಾಸ್) : ಇದರಲ್ಲಿ ಗಾತ್ರಾನುಸಾರ 50% ಹೈಡ್ರೊಜನ್ ಮತ್ತು 40% ಇಂಗಾಲದ ಮಾನಾಕ್ಸೈಡ್ ಇರುತ್ತವೆ.  ಉಳಿದದ್ದು ನೈಟ್ರೊಜನ್ ಮತ್ತು ಇಂಗಾಲದ ಡೈಆಕ್ಸೈಡ್. ಕೆಂಗಾವಿಗೆ ಕಾದಕೋಕಿನ ಮೇಲೆ ಹಬೆಯನ್ನು ಹಾಯಿಸಿದಾಗ ಈ ಅನಿಲಮಿಶ್ರಣ ಉಂಟಾಗುವುದು. 
           ಅ+ಊ2ಔ(ಅಔ+ಊ2+20 ಕಿಲೋ ಕ್ಯಾಲರಿ.    (14000 ಸೆ.)
ಇದು ಉಷ್ಣಗ್ರಾಹಕ ಕ್ರಿಯೆಯಾದ್ದರಿಂದ ಉಷ್ಣತೆ ಬಲು ಬೇಗ 10000  ಸೆ. ಗಿಂತ ಕೆಳಗಿಳಿಯುವುದು. ಆಗ ಹಬೆ ಇಂಗಾಲದೊಡನೆ ವರ್ತಿಸಿ ಇಂಗಾಲದ ಡೈಆಕ್ಸೈಡನ್ನು ಕೊಡುವುದು.  

            ಅ+2ಊ2ಔ(ಅಔ2+2ಊ2 (10000 ಸೆ.) 
ಇದಕ್ಕೆ ಉಷ್ಣದಾಯಕ ಮೌಲ್ಯವಿಲ್ಲ.  ಆದ್ದರಿಂದ ಹೀಗಾಗಕೂಡದು.  ವಾಸ್ತವವಾಗಿ ಹೀಗಾಗಲು ಬಿಡುವುದಿಲ್ಲ.  ಉಷ್ಣತೆ 10000 ಸೆ. ತಲುಪುವ ಮುಂಚೆಯೇ ಹಬೆಯ ಸರಬರಾಜನ್ನು ನಿಲ್ಲಿಸಿ ಗಾಳಿ ಹಾಯಿಸುವರು. ಆಗ ಕೆಳ ಕಂಡ ಉಷ್ಣಜನಕ ಕ್ರಿಯೆ ನಡೆಯುವುದು:
              2ಅ+(ಔ2+ಓ2 )((2ಅಔ+ಓ2)-58 ಕಿ.ಕೆ. 
ಆಗ ಉಷ್ಣತೆ ಪುನಃ 14000 ಸೆ. ಗೆ ಏರುವುದು. ಈ ಕ್ರಮವನ್ನು ಪುನರಾವರ್ತಿಸಿ ಧಾರಾಕಾರವಾಗಿ ಜಲಾನಿಲವನ್ನು ಪಡೆಯಬಹುದು. ಅನಿಲ ನೀಲಿ ಜ್ವಾಲೆಯಿಂದ ಉರಿಯುತ್ತದೆ. ಇದನ್ನು ಹೈಡ್ರೊಜನ್ ಮತ್ತು ಮಿಥೆನಾಲ್ ತಯಾರಿಸಲು ಉಪಯೋಗಿಸುತ್ತಾರೆ.  ಅದರ ಉಷ್ಣದಾಯಕ ಮೌಲ್ಯ ಘನ ಅಡಿಗೆ 
                         2ಅ+(ಔ2+ಓ2) ಗಾಳಿ
450-500 ಃಖಿU, ಇರುವ ಕಲ್ಲಿದ್ದಲ ಅನಿಲದ ಉಷ್ಣದಾಯಕ ಮೌಲ್ಯಕ್ಕಿಂತ ಕಡಿಮೆ. ಆದ್ದರಿಂದ ಕಾಬ್ರ್ಯೊರೇಟೆಡ್ ಜಲಾನಿಲವನ್ನು ತಯಾರಿಸುವುದು ರೂಢಿಯಾಗಿದೆ.  ಅದರ ಬಗ್ಗೆ ವಿವರಗಳು ಚಿತ್ರ 2ರಲ್ಲಿವೆ.  
ಅನಿಲ ಉತ್ಪಾದಕ 10 ವ್ಯಾಸ ಮತ್ತು 15 ಎತ್ತರವಿರುವ ಒಂದು ಉಕ್ಕಿನ ಉರುಳೆ. ಕೋಕ್ ಸೇರಿಸಲು ಕುಲುಮೆಯ ಮೇಲ್ಭಾಗದಲ್ಲಿ ರಂಧ್ರವುಂಟು. ಗಾಳಿ ಮತ್ತು ಹಬೆಯನ್ನು ಹಾಯಿಸಲು ಪ್ರತ್ಯೇಕ ವ್ಯವಸ್ಥೆ ಇದೆ. ಆವರ್ತ ಸ್ವರೂಪದ ಈ ಕ್ರಿಯಾವಿಧಾನ ಈ ಕೆಲವು ಅವಧಿಗಳನ್ನು ಒಳಗೊಂಡಿದೆ.  
I ಊಧ್ರ್ವ ಪ್ರವಾಹಾವಧಿ : ಒಂದೊವರೆ ಮಿನಿಟುಗಳು.  ಹಬೆಯ ಕೊಳವೆಯ ತಳಶಾಖೆಯ ಮೂಲಕ ಹಬೆಯನ್ನು ಮೇಲಕ್ಕೆ ಊದಲಾಗುವುದು. ಈಗ ಗಿ1 ಕವಾಟ ತೆರೆದಿರುವುದರಿಂದ ಜಲಾನಿಲ ಉತ್ಪಾದಕದಿಂದ ಕಾಬ್ರ್ಯೂರೇಟರನ್ನು ಪ್ರವೇಶಿಸುವುದು.  
II ಅಧೋಪ್ರವಾಹಾವಧಿ : ಇದೂ ಒಂದೂವರೆ ಮಿನಿಟುಗಳು.  ಈಗ ಹಬೆಯ ಕೊಳವೆಯ ಮೇಲಿನ ಶಾಖೆಯ ಮೂಲಕ ಹಬೆಯನ್ನು ಕೆಳಮುಖವಾಗಿ ಊದಲಾಗುವುದು. ಉತ್ಪತ್ತಿಯಾದ ಜಲಾನಿಲ ಗಿ2 ಕವಾಟದ ಮೂಲಕ ಕಾಬ್ರ್ಯೂರೇಟರನ್ನು ಹಿಂದಿನಂತೆಯೇ ಪ್ರವೇಶಿಸುವುದು.  ಗಿ1  ಮತ್ತು ಗಿ2  ಕವಾಟಗಳು ಒಂದೇ ಸಮತಲದಲ್ಲಿವೆ.  ಅವನ್ನು ಬಂಧಿಸುವ ಸರಳು ಒಂದು ಕವಾಟ ತೆರೆದಿರುವಾಗ ಮತ್ತೊಂದು ಮುಚ್ಚಿಕೊಳ್ಳುವಂತೆ ನೋಡಿಕೊಳ್ಳುತ್ತದೆ. 
III  ವಿರೇಚನ (ಪರ್ಜ್): ಮೂರು ಮಿನಿಟ್ ಹಬೆ ಊದಿದ ಅನಂತರ ಮತ್ತೆ ಒಂದು ಮಿನಿಟ್ ಕಾಬ್ರ್ಯೊರೇಟರಿನ ಮೇಲ್ಭಾಗದಿಂದ ಹಬೆ ಹಾಯಿಸುವರು. ಇದು ಕಾಬ್ರ್ಯೂರೇಟರ್ ಮತ್ತು ಅಧಿಕೋಷ್ಣಕದಲ್ಲಿರುವ ಜಲಾನಿಲವನ್ನೆಲ್ಲ ಸಂಗ್ರಾಹಕಕ್ಕೆ ದೂಡುವುದು.  ಅನಂತರವೇ ಗಾಳಿಯನ್ನು ಒಳಗೆ ಬಿಡಬೇಕು. ಇಲ್ಲದಿದ್ದರೆ ಜಲಾನಿಲ ಗಾಳಿಯೊಡನೆ ಸೇರಿ ಆಸ್ಫೋಟಿಸುವುದು.  
Iಗಿ  ಪುನಶ್ಚೇತನ ಕಾಲ (ರಿವೈವಿಫೈಯಿಂಗ್ ಪೀರಿಯಡ್): ಎರಡು ಮಿನಿಟುಗಳು. ಈಗ ಗಾಳಿ ಊದಿದರೆ ಉಷ್ಣತೆ 14000 ಸೆಂ. ಗೆ ಏರುವುದು. ಹೀಗೆ ಕ್ರಿಯಾಚಕ್ರದ ಒಟ್ಟು ಅವಧಿ ಆರು ಮಿನಿಟುಗಳೆಂದಾಯಿತು.  
ಕಾಬ್ರ್ಯೂರೇಟರ್ ಮತ್ತು ಅಧಿಕೋಷ್ಟಕಗಳನ್ನು (ಸೂಪರ್ ಹೀಟರ್ಸ್) ಉಕ್ಕಿನಿಂದ ಮಾಡಿರುತ್ತಾರೆ. ಅವುಗಳಲ್ಲಿ ಚದುರಂಗದ ನಮೂನೆಯ ಇಟ್ಟಿಗೆಯ ಕಟ್ಟಡವಿದೆ.  ಗಾಳಿ ಊದಿದ ಕಾಲದಲ್ಲಿ ದಹನ ಉತ್ಪನ್ನಗಳು ಇವುಗಳ ಮೂಲಕ ಹಾದು ಇಟ್ಟಿಗೆಯ ಕಟ್ಟಡವನ್ನು ಕಾಯಿಸುತ್ತವೆ.  ಕೆಲಸಕ್ಕೆ ಬಾರದ ಅನಿಲಗಳು ಕವಾಟದ ಮೂಲಕ ಚಿಮಣಿಯನ್ನು ಸೇರಿ ಹೊರಬೀಳುತ್ತವೆ. ಹಬೆಯನ್ನು ಹಾಯಿಸುವ ಸಮಯದಲ್ಲಿ ಜಲಾನಿಲ ಕಾಬ್ರ್ಯೂರೇಟರನ್ನು ಮೇಲ್ಭಾಗದಿಂದ ಪ್ರವೇಶಿಸುವುದು ಸರಿಯಷ್ಟೆ.  ಆ ಹೊತ್ತಿಗೆ ಸರಿಯಾಗಿ ತುಂತುರು ಯಂತ್ರ (ಆಟೊಮೈಸರ್) ಪ್ಯಾರಾಫಿನ್ ಎಣ್ಣೆಯನ್ನು ಕೆಂಗಾವಿಗೆ ಕಾದ ಇಟ್ಟಿಗೆಯ ಗೂಡಿನ ಮೇಲೆ ಚಿಮುಕಿಸುತ್ತದೆ.  ಎಣ್ಣೆಯಲ್ಲಿರುವ ಭಾರವಾದ ಅಣುಗಳು ಸಣ್ಣ ಅಣುಗಳಾಗಿ ಒಡೆಯುತ್ತವೆ. ಈ ವಿಭಜನಕ್ರಿಯೆ ಅಧಿಕೋಷ್ಟಕದಲ್ಲಿ ಪೂರ್ಣಗೊಳ್ಳುವುದು. ಉತ್ಪತ್ತಿಯಾದ ಕಾಬ್ರ್ಯೊರೇಟೆಡ್ ಜಲಾನಿಲ ಜಲಕೋಶದಲ್ಲಿ (ವಾಟರ್‍ಬಾಕ್ಸ್) ಡಾಂಬರಿನ ಅಂಶವನ್ನು ಕಳೆದುಕೊಳ್ಳುವುದು.  ನೀರಿನಿಂದ ತಣಿದ ಕೊಳಾಯಿಗಳ ಮೂಲಕ ಹಾದು ಶುದ್ಧೀಕರಣ ವಿಭಾಗವನ್ನು ಮುಟ್ಟುವುದು.  ಇದರಲ್ಲಿ ಮರದ ತುದಿಗೆ ಲೇಪನವಾದ ಸುಣ್ಣ ಮತ್ತು ಜಲಯುಕ್ತ ಫೆರಿಕ್ ಆಕ್ಸೈಡಿನ ಮಿಶ್ರಣವಿರುತ್ತದೆ. ಅನಿಲದಲ್ಲಿರುವ ಹೈಡ್ರೊಜನ್ ಸಲ್ಫೈಡನ್ನು ಕಬ್ಬಿಣದ ಸಲ್ಫೈಡಾಗಿ ನಿವಾರಿಸುವುದು ಇದರ ಕೆಲಸ. ಎಂದಿನಂತೆ ನಿಷ್ಕಾಸಕ ಅನಿಲವನ್ನು ಇದು ಮುಂದೂಡುತ್ತಿರುತ್ತದೆ.  ಹೀಗೆ ಶುದ್ಧಿಗೊಂಡ ಕಾಬ್ರ್ಯೂರೇಟೆಡ್ ಜಲಾನಿಲ ಸಂಗ್ರಾಹಕದಲ್ಲಿ ಕೂಡುತ್ತದೆ.  

ಚಿತ್ರ-2

2. ಜ್ವಲನಾನಿಲ (ಪ್ರೊಡ್ಯೊಸರ್ ಗ್ಯಾಸ್) : ಕೀಳುದರ್ಜೆ ಕಲ್ಲಿದ್ದಲಿನಿಂದ ಇದನ್ನು ಉತ್ಪಾದಿಸಬಹುದು.  ಆದ್ದರಿಂದ ಇದೊಂದು ಅಗ್ಗದ ಇಂಧನ.  ಇದರಲ್ಲಿ ಮುಖ್ಯವಾಗಿ ಇಂಗಾಲದ ಮಾನಾಕ್ಸೈಡು ಮತ್ತು ನೈಟ್ರೊಜನ್ ಇವೆ.  ಅನೇಕ ಪದರ ಕಾದ ಕಲ್ಲಿದ್ದಲಿನ ಮೂಲಕ ಗಾಳಿಯನ್ನು ಒತ್ತಡದಿಂದ ದೂಡಿದರೆ, ಇದು ಉತ್ಪತ್ತಿಯಾಗುವುದು. ಇದಕ್ಕಾಗಿ ಬಳಸುವ ಕುಲುಮೆಯನ್ನು ಚಿತ್ರ 3ರಲ್ಲಿ ತೋರಿಸಲಾಗಿದೆ. 

ಚಿತ್ರ-3

ಮೂಲತಃ ಇದೊಂದು ಗಾಳಿ ಸೋರದ ಒಲೆ.  ಇದರ ಬುಡದಲ್ಲಿ ಗಾಳಿಹಾಯಿಸುವ ಪ್ರವೇಶನಾಳವೂ ಮೇಲ್ಭಾಗದಲ್ಲಿ ನಿರ್ಗಮನ ನಾಳವೂ ಇವೆ.  ಕ್ರಿಯೆಗೆ ಅಡ್ಡಿಯಾಗದಂತೆ ಬೂದಿಯನ್ನು ತೆಗೆಯಲು ಮತ್ತು ಕಲ್ಲಿದ್ದಲನ್ನು ಸೇರಿಸಲು ಸೂಕ್ತ ಏರ್ಪಾಡುಂಟು.  
ಗಾಳಿಯಲ್ಲಿರುವ ಆಕ್ಸಿಜನ್ನು ಕಲ್ಲಿದ್ದಲಿನೊಡನೆ ವರ್ತಿಸಿ ಮೊದಲು ಇಂಗಾಲದ ಡೈಆಕ್ಸೈಡನ್ನು ಕೊಡುತ್ತದೆ. ಇದು ಮೇಲೇರಿದಂತೆಲ್ಲ ಇಂಗಾಲದ ಮಾನಾಕ್ಸೈಡಿಗೆ ಅಪಕರ್ಷಿತವಾಗುತ್ತಿದೆ. ಇಲ್ಲಿ ನಡೆಯುವ ಕ್ರಿಯೆಗಳನ್ನು ಕೆಳಕಂಡ ಸಮೀಕರಣಗಳು ಸೂಚಿಸುತ್ತವೆ.  
                          ಅ+ಔ2→ಅಔ2
                                                                 ಅ+ಅಔ→2ಅಔ
                                         2ಅ+ಔ2→2ಅಔ
ಒಟ್ಟು ಕ್ರಿಯೆಯಲ್ಲಿ ವಿಪರೀತ ಉಷ್ಣ ಹೊರಬೀಳುತ್ತದೆ.  ಆದ್ದರಿಂದ ಉಪಯೋಗಿಸಬೇಕಾದ ಸ್ಥಳದಲ್ಲೆ ಇದನ್ನು ಉತ್ಪಾದಿಸಿದರೆ ಈ ಉಷ್ಣದ ಪ್ರಯೋಜನವೂ ನಮಗೆ ಲಭಿಸುತ್ತದೆ.  ಈ ಇಂಧನವನ್ನು ಗಾಜು, ಸತು ಮುಂತಾದುವನ್ನು ತಯಾರಿಸುವ ಕುಲುಮೆಗಳನ್ನು ಕಾಯಿಸಲು ವಿಶೇಷವಾಗಿ ಬಳಸುತ್ತಾರೆ. ಲಾರಿ, ಬಸ್ಸು ಇತ್ಯಾದಿಗಳನ್ನು ಓಡಿಸಲು ಪುಟ್ಟ ಪ್ರೊಡ್ಯೊಸರುಗಳನ್ನು ಅವುಗಳಿಗೆ ಜೋಡಿಸಬಹುದು.  ಒಂದು ಗ್ಯಾಲನ್ ಪೆಟ್ರೋಲಿನ ಬದಲು ಸುಮಾರು 13 ಕಿ.ಗ್ರಾಂ. ಕಲ್ಲಿದ್ದಲು ಸಾಕು.  ಭಾರತದಲ್ಲಿ ಕಲ್ಲಿದ್ದಲ ಗಣಿಗಳು ಅಷ್ಟಾಗಿಲ್ಲ. ಆದ್ದರಿಂದ ಅಲ್ಲಿ ಇದ್ದಲನ್ನು ಉಪಯೋಗಿಸಬಹುದು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಪೆಟ್ರೋಲ್ ಅಭಾವ ಉಂಟಾದಾಗ ಜ್ವಲನಾನಿಲದಿಂದ ವಾಹನಗಳನ್ನು ಓಡಿಸುತ್ತಿದ್ದರೆಂಬುದನ್ನು ನೆನೆಯಬಹುದು. 
4.ಅರೆಜಲಾನಿಲ (ಸೆಮಿ ವಾಟರ್ ಗ್ಯಾಸ್): ಜ್ವಲನಾನಿಲದ ತಯಾರಿಕೆಯಲ್ಲಿ ಬಳಸುವ ಗಾಳಿಯೊಡನೆ ಅಗತ್ಯ ಪ್ರಮಾಣ ಹಬೆಯನ್ನೂ ಬೆರೆಸಿದರೆ ಇದು ಉತ್ಪತ್ತಿಯಾಗುತ್ತದೆ.  ಇದರಲ್ಲಿರುವ ಮುಖ್ಯಾಂಶಗಳ ಪ್ರಮಾಣ ಕೆಳಕಂಡಂತಿದೆ. 
              

  ನೈಟ್ರೊಜನ್                    ಶೇಕಡಾ         56
                ಇಂಗಾಲದ ಮಾನಾಕ್ಸೈಡ್                         27
                ಹೈಡ್ರೊಜನ್                                  11
                ಇಂಗಾಲದ ಡೈಆಕ್ಸೈಡ್                           5
                ಮೀಥೇನ್                                    1
ಈ ಇಂಧನದ ಉಷ್ಣದಾಯಕ ಮೌಲ್ಯ ಘನ ಅಡಿಗೆ 160-180 ಃಖಿU. ವಿವಿಧ ಅನಿಲ ಇಂಧನಗಳ ಉಷ್ಣದಾಯಕ ಮೌಲ್ಯಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.  
                        ಸಾವಿರ ಘನ ಅಡಿಗಳಿಗೆ 
           ಕಲ್ಲಿದ್ದಲ ಅನಿಲ                           10,000 ಕ್ಯಾಲರಿಗಳು
           ಕಾಬ್ರ್ಯೊರೇಟೆಡ್ ಜಲಾನಿಲ                    9,060     “
           ಜಲಾನಿಲ                                 3.560     “
           ಅರೆಜಲಾನಿಲ                              1,320     “
           ಕಲ್ಲಿದ್ದಲಿಂದ ಪಡೆದ ಜ್ವಲನಾನಿಲ                 1,130     “
           ಕೋಕಿನಿಂದ ಪಡೆದ ಜ್ವಲನಾನಿಲ                   990     “
ಜ್ವಲನಾನಿಲದ ಉಷ್ಣದಾಯಕ ಮೌಲ್ಯ ಅತ್ಯಂತ ಕಡಿಮೆಯಾಗಿರಲು ಅದರಲ್ಲಿರುವ ದಹನಯೋಗ್ಯವಲ್ಲದ ನೈಟ್ರೊಜನ್ ಅಂಶ ಹೆಚ್ಚಾಗಿರುವುದೇ ಕಾರಣ. 
5. ತೈಲಾನಿಲ (ಆಯಿಲ್ ಗ್ಯಾಸ್) : ಪ್ರಯೋಗಶಾಲೆಗಳ ಮತ್ತು ಇತರ ಸಣ್ಣ ಉದ್ಯಮಗಳ ಉಪಯೋಗಕ್ಕೆ ಸೀಮಿತವಾಗಿರುವ ಅನಿಲ ಇಂಧನ.  ಪೆಟ್ರೋಲಿಯಂ ಉಪವಸ್ತುವಾದ ಸಾಂದ್ರತೈಲವನ್ನು ಇದಕ್ಕಾಗಿ ಬಳಸುವರು. ಕೆಂಗಾವಿಗೆ ಕಾದ ಕಬ್ಬಿಣದ ರಿಟಾರ್ಟಿನೊಳಕ್ಕೆ ಸಾಂದ್ರತೈಲ ತೆಳುವಾದ ಧಾರೆಯ ರೂಪದಲ್ಲಿ ಪ್ರವೇಶಿಸುತ್ತದೆ. ಆಗ ಅದರಲ್ಲಿರುವ ಅಣುಗಳು ವಿಭಜಿಸಿ ಕೆಳಕಂಡ ಹೈಡ್ರೊಕಾರ್ಬನ್ ಅನಿಲಗಳು ಉಂಟಾಗುತ್ತವೆ.  
             ಅ16ಊ34              6ಅಊ4     +    2ಅ2ಊ4       +   ಅ2ಊ2    +    4ಅ
                                           ಮೀಥೇನ್    ಅಸಿಟಲೀನ್      ಎಥಿಲೀನ್ 
ಹೊರಬೀಳುವ ಅನಿಲಗಳಲ್ಲಿರುವ ಡಾಂಬರಿನ ಅಂಶವನ್ನು ತೆಗೆದು ಶುದ್ಧಿಗೊಳಿಸಿ ಈ ಸಂಗ್ರಾಹಕಗಳಲ್ಲಿ ಕೂಡಿಡಲಾಗುವುದು.  
6. ಗ್ರಾಮಸಾರಾನಿಲ (ಸ್ಯೂಯೇಜ್ ಗ್ಯಾಸ್) :  ಗ್ರಾಮಸಾರವನ್ನು ಸಂಗ್ರಹಿಸಿ ಅನೇಯ್ರೋಬಿಕ್ ಬ್ಯಾಕ್ಟೀರಿಯದಿಂದ (ಆಕ್ಸಿಜನ್ ಇಲ್ಲದೆಯೇ ಜೀವಿಸಬಲ್ಲ ಅಣುಜೀವಿ) ಹುಳಿಸಿದರೆ ಅದರಲ್ಲಿರುವ ನೈಟ್ರೊಜನ್ ವಸ್ತುಗಳು ನೈಟ್ರೇಟುಗಳಾಗುವುವು.  ಇಂಗಾಲೀಯ ವಸ್ತುಗಳ ಒಂದು ಭಾಗ ಮೀಥೇನ್ ಮತ್ತು ಇಂಗಾಲದ ಡೈ ಆಕ್ಸೈಡ್ ಆಗುವುದು. ಈ ರೀತಿ ಸಾಕಷ್ಟು ಅನಿಲವನ್ನು ಶೇಖರಿಸಬಹುದು.  ಅದರ ಉಷ್ಣದಾಯಕ ಮೌಲ್ಯ ಕಡಿಮೆ ಏನಲ್ಲ.  ಭಾರತದ ಪ್ರಮುಖ ನಗರಗಳಲ್ಲೇ ಇದನ್ನು ಆಚರಣೆಗೆ ತರಬಹುದು.  
7. ಅಸಿಟಲೀನ್ : ಒತ್ತಡದಲ್ಲಿ ಉಕ್ಕಿನ ಉರುಳೆಗಳಲ್ಲಿ ಇಟ್ಟಿರುತ್ತಾನೆ. ಅಗ್ಗದ ಇಂಧನವಾದ್ದರಿಂದ ಮಧ್ಯಮದರ್ಜೆಯ ಗ್ರಾಹಕರಿಗೂ ಇದು ಎಟಕುವಂಥದು. ಲೋಹಗಳನ್ನು ಕರಗಿಸಲು ಮತ್ತು ಬೆಸೆಯಲು ಆಕ್ಸಿ-ಅಸಿಟಲೀನ್ ಜ್ವಾಲೆಯಿಲ್ಲದೆ ನಡೆಯುವಂತಿಲ್ಲ. 
8. ಬ್ಲೌ ಅನಿಲ :  ಮೀಥೇನಿನಿಂದ ಹೆಕ್ಸೇನ್‍ವರೆಗಿನ ಹೈಡ್ರೊಕಾರ್ಬನ್ನುಗಳು ಮತ್ತು ಹೈಡ್ರೊಜನ್ನಿನ ಮಿಶ್ರಣ. ಇದು ಒಂದು ಉತ್ತಮ ಇಂಧನ. 
ಅನಿಲ ಇಂಧನಗಳ ವೈಶಿಷ್ಟ್ಯ :  ಇವನ್ನು ಉರಿಸಲು ವಿಶೇಷ ವ್ಯವಸ್ಥೆ ಬೇಕಿಲ್ಲ.  ಹೊತ್ತಿಸುವುದು ಸುಲಭ. ಹೊಗೆ ಮತ್ತು ಬೂದಿಗಳ ಕಾಟವಿಲ್ಲ. ನಿಯಂತ್ರಣ ಬಹು ಸುಲಭ.  ಅಂತರ್ದಹನ ಯಂತ್ರಗಳಲ್ಲಿ ನಿರಾತಂಕವಾಗಿ ಬಳಸಬಹುದು. ಉಷ್ಣಕ್ರಿಯಾ ಪರಿವರ್ತನೆಯ ದೃಷ್ಟಿಯಿಂದ ಮಿತವ್ಯಯಿಗಳು. ಉಷ್ಣ ಉಳಿತಾಯ ಕುಲುಮೆಗಳಲ್ಲಿ ತೃಪ್ತಿಕರವಾಗಿ ಉಷ್ಣ ಒದಗಿಸುತ್ತವೆ.  
ಭಾರತದಲ್ಲೂ ಇಂಧನದ ಸಮಸ್ಯೆಯಿದೆ.  ಅದನ್ನು ಬಗೆಹರಿಸುವ ಮಾರ್ಗಗಳನ್ನು ಮುಂದೆ ಸೂಚಿಸಲಾಗಿದೆ.  i. ಇಲ್ಲಿ ಸಸ್ಯಸಂಪತ್ತು ಅಗಾಧವಾಗಿದ್ದ ಕಾಲವೊಂದಿತ್ತು.  ಆದ್ದರಿಂದ ಸೌದೆ ಮತ್ತು ಇದ್ದಲನ್ನು ಧಾರಾಳವಾಗಿ ಉಪಯೋಗಿಸಬಹುದಾಗಿತ್ತು.  ಇದರಿಂದ ಅರಣ್ಯ ನಾಶವಾಗುವುವೆಂದು ಶಂಕಿಸುವ ಅಗತ್ಯವಿರಲಿಲ್ಲ.  ಏಕಕಾಲದಲ್ಲಿ ಗಿಡನೆಟ್ಟು ಬೆಳೆಸುವ ವ್ಯಾಪಕಯೋಜನೆ ಕಾರ್ಯಕ್ರಮ ಇಟ್ಟುಕೊಂಡರೆ ಸಾಕು. ii. ಭಾರತದಲ್ಲಿ ಸಕ್ಕರೆಯ ಉದ್ಯಮ ಬೆಳೆಯುತ್ತಿದೆ. ಅದರೊಂದಿಗೆ ಕಾಕಂಬಿಯ ಉತ್ಪಾದನೆಯೂ ಆಗುತ್ತಿರುವುದರಿಂದ ಅದನ್ನು ಲಾಭದಾಯಕವಾಗಿ ಆಲ್ಕೊಹಾಲ್ ಇಂಧನವಾಗಿ ಪರಿವರ್ತಿಸಬಹುದು. iii. ಭಾರತದಲ್ಲಿರುವ ಪೆಟ್ರೋಲಿಯಂ ಮತ್ತು ಕಲ್ಲಿದ್ದಲಿನ ನಿಕ್ಷೇಪಗಳು ವಿರಳ. ಹೊಸ ನಿಕ್ಷೇಪಗಳ ತಪಾಸಣೆ ಮತ್ತು ಸದ್ವಿನಿಯೋಗಕ್ಕೆ ಆದ್ಯ ಗಮನ ನೀಡಬೇಕು. iv. ಸಗಣಿ ಮತ್ತು ಗ್ರಾಮಸಾರದಿಂದ ಅನಿಲ ಇಂಧನಗಳನ್ನು ಪಡೆಯಲು ಪ್ರಯತ್ನಿಸಲಾಗಿದೆ. ಸಾಗರದಾಳದಿಂದ ಪೆಟ್ರೋಲ್ ತೆಗೆಯಲಾಗುತ್ತಿದೆ.  
ಪರಮಾಣು ಶಕ್ತ ಖನಿಜಗಳು :  ಶಕ್ತಿಯ ಬಳಕೆ ಹೆಚ್ಚಿದಂತೆಲ್ಲ ಅದರ ಉತ್ಪತ್ತಿ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳಿಂದ ಆಗಬೇಕು.  ಆದರೆ ಇವುಗಳ ನಿಕ್ಷೇಪ ಪ್ರಪಂಚದಲ್ಲಿ ಮಿತವಾಗಿದೆ.  ಇಂದಿನ ಉಪಯೋಗದ ಪ್ರಮಾಣದಂತೆ ಪ್ರಪಂಚದ ಕಲ್ಲಿದ್ದಲಿನ ನಿಕ್ಷೇಪಗಳೆಲ್ಲ ಸುಮಾರು ಸಾವಿರ ವರ್ಷಗಳಲ್ಲಿಯೂ ಪೆಟ್ರೋಲಿಯಂನ ನಿಕ್ಷೇಪಗಳೆಲ್ಲ ಕೆಲವು ದಶಕಗಳಲ್ಲಿಯೂ ಬರಿದಾಗುವುವು.  ಇವುಗಳನ್ನೇ ನಂಬಿಕೊಂಡರೆ ಒಂದೆರಡು ಶತಮಾನಗಳಲ್ಲಿಯೇ ನಮ್ಮ ನಾಗರಿಕತೆಯ ಬೆಳಕು ನಂದಬೇಕಾಗುವುದು.  ಅದೃಷ್ಟವಶಾತ್ ಪರಿಸ್ಥಿತಿ ಅಷ್ಟು ನಿರಾಶಾದಾಯಕವಾಗಿಲ್ಲ. ಮನುಷ್ಯನಿಗೆ ಪ್ರಕೃತಿಯಲ್ಲಿ ಹೊಸತೊಂದು ಶಕ್ತಿಯ ಮೂಲ ದೊರಕಿದೆ. ಅದು ಪರಮಾಣುಶಕ್ತಿ. 
1911ರಲ್ಲಿ ರುದರ್‍ಫರ್ಡ್ ಎಂಬ ಪ್ರತಿಭಾವಂತ ವಿಜ್ಞಾನಿ ಪರಮಾಣುರಚನೆಯ ವಿವರವನ್ನು ತಿಳಿಸಿದಂದಿನಿಂದ ಹೊಸಯುಗದ ಪ್ರಾರಂಭವಾಯಿತು.  ಯುರೇನಿಯಂ (ಮತ್ತು ಥೋರಿಯಂ) ಎಂಬ ವಿಕಿರಣಪಟು ಲೋಹದ ಪರಮಾಣುಗಳನ್ನು ವಿದಳಿಸುವುದರಿಂದ ಅಸಾಧಾರಣವಾದ ಶಕ್ತಿ ಉತ್ಪತ್ತಿಯಾಗುತ್ತದೆಂದು ತಿಳಿದುಬಂದಿದೆ. 
ಒಂದು ಯುರೇನಿಯಂ (U+235) ತುಂಡಿನಲ್ಲಿ ಒಂದು ಪರಮಾಣುವಿನ ಬೀಜ ಛಿದ್ರವಾದರೆ ಸಾಕು. ಅಲ್ಲಿರುವ ಪರಮಾಣುಗಳೆಲ್ಲ ಒಂದೊಂದಾಗಿ ವಿದಳಿಸಿ ಅಸಾಧಾರಣವಾದ ಶಕ್ತಿ ಹೊರಬೀಳುವುದು. ಇದಕ್ಕೆ ಸರಣಿಕ್ರಿಯೆಯ (ಚೇನ್ ರಿಆಕ್ಷನ್) ಎಂದು ಹೆಸರು.  ರಿಯಾಕ್ಟರುಗಳಲ್ಲಿ ನಡೆಯುವುದು ಇದೇ ರೀತಿಯ ಪ್ರಕ್ರಿಯೆ. ಒಂದು ಪೌಂಡು ಯುರೇನಿಯಂನ (U235) ಪರಮಾಣುಗಳ ಬೀಜ ವಿದಳನದಿಂದ ಉತ್ಪತ್ತಿಯಾಗುವ ಶಕ್ತಿ 1,500 ಟನ್ ಕಲ್ಲಿದ್ದಲಿನಿಂದ ಅಥವಾ 2,500 ಗ್ಯಾಲನ್ ಪೆಟ್ರೋಲಿನಿಂದ ಉತ್ಪತ್ತಿಯಾಗುವ ಶಕ್ತಿಗೂ ಸಮನಾಗಿರುತ್ತದೆ.  ಯುರೇನಿಯಂ, ಥೋರಿಯಂನಂಥ ವಿಕಿರಣಪಟು ವಸ್ತುಗಳಲ್ಲಿರುವ ಖನಿಜಗಳನ್ನು ಗೈಗರ್ ಮುಲ್ಲರ್ ಕೌಂಟರ್ ಎಂಬ ಸಾಧನದಿಂದ ಸುಲಭವಾಗಿ ಕಂಡುಹಿಡಿಯಬಹುದು. ಪ್ರತಿ ದೇಶದಲ್ಲೂ ಈ ಖನಿಜ ನಿಕ್ಷೇಪಗಳನ್ನು ಕಂಡು ಹಿಡಿಯುವ ಪ್ರಯತ್ನ ಬಹಳ ಬಿರುಸಾಗಿ ನಡೆಯುತ್ತಿದೆ. ಈ ಖನಿಜ ನಿಕ್ಷೇಪಗಳೆಷ್ಟಿವೆಯೆಂಬ ವಿಷಯದಲ್ಲಿ ಅಂಕಿ ಅಂಶಗಳು ತಿಳಿಯದು. ಭಾರತದಲ್ಲಿ ಇಲ್ಲಿಯವರೆಗೆ ನಡೆಸಿರುವ ಪರಿಶೋಧನೆಯ ಪ್ರಕಾರ 30,000 ಟನ್ ಯುರೇನಿಯಂ ನಿಕ್ಷೇಪವೂ 5,00,000 ಟನ್ ಥೋರಿಯಂನ ನಿಕ್ಷೇಪವೂ ಇವೆಯೆಂದು ತಿಳಿದು ಬಂದಿದೆ.  
ರಾಸಾಯನಿಕ ಇಂಧನಗಳು :  ಇದುವರೆಗೆ ಅಭ್ಯಸಿಸಿದ ಇಂಧನಗಳ ಗುಣವನ್ನು ಸೂತ್ರೀಕರಿಸಿ
                           ಇಂಧನ + ಆಕ್ಸಿಜನ್ (ದಹನ
ಎಂದು ಬರೆಯಬಹುದು (ಪರಮಾಣುಶಕ್ತಿ ಇದರಲ್ಲಿ ಸೇರಿಲ್ಲ). ಇನ್ನೂ ನಿಖರವಾಗಿ ಹೇಳುವುದಾದರೆ ಇಂಧನದಲ್ಲಿರುವ ಇಂಗಾಲಾಂಶ ಗಾಳಿಯಲ್ಲಿರುವ ಆಕ್ಸಿಜನ್ ಸಹಾಯದಿಂದ ಉರಿದು ಉಷ್ಣಶಕ್ತಿ ಪೂರೈಕೆ ಆಗುತ್ತದೆ.  
                          ಇಂಗಾಲ + ಆಕ್ಸಿಜನ್ (ಶಕ್ತಿ
ಆದ್ದರಿಂದ ಇವೆರಡರಲ್ಲಿ ಯಾವುದೊ ಒಂದು (ಅಥವಾ ಎರಡೊ) ಕೊರೆಯಾದಾಗ ಶಕ್ತಿ ಲಭಿಸದು. ಆಕಾಶಯಾನದಲ್ಲಿ ನೌಕೆಯನ್ನು ಮುನ್ನೂಕುವ (ಅಥವಾ ವೇಗ ತಗ್ಗಿಸಲು ಹಿನ್ನೂಕುವ) ಶಕ್ತಿಯನ್ನು ಚಾಲಕ ರಾಕೆಟ್ಟುಗಳು ಪೂರೈಸುತ್ತವೆ. ಇಲ್ಲೂ ದಹನಕ್ರಿಯೆಯೇ ಮೂಲಕಾರಣ. ಆದರೆ ವಾಯುಮಂಡಲದ ಮೇಲ್ಪದರ ಮತ್ತು ಮುಂದಿನ ನಿರ್ವಾತ ಪ್ರದೇಶದ ಸುದೀರ್ಘಯಾನದಲ್ಲಿ ಬಾಹ್ಯಮೂಲಗಳಿಂದ ಆಕ್ಸಿಜನ್ ದೊರೆಯದು. ಅಲ್ಲದೆ ಸಾಂಪ್ರದಾಯಿಕ ಇಂಧನವನ್ನು ರಾಕೆಟ್ ಹೊತ್ತು ಕೊಂಡೊಯ್ಯುವುದು ಭಾರದ ಮತ್ತು ಲಭ್ಯಶಕ್ತಿಯ ದೃಷ್ಟಿಯಿಂದ ಉಪಯುಕ್ತವಲ್ಲ. ಆದ್ದರಿಂದ ಆಕ್ಸಿಜನ್ನನ್ನು ಒಳಗೊಂಡಿರುವ ರಾಸಾಯನಿಕ ಇಂಧನ ಇಂಥ ಸಮಸ್ಯೆಗೆ ಪರಿಹಾರ. ದ್ರವ ಹೈಡ್ರೊಜನ್-ದ್ರವ ಆಕ್ಸಿಜನ್ ಮಿಶ್ರಣ ಇಂದು ರಾಕೆಟ್ ಯಾನದಲ್ಲಿ ಬಳಕೆಯಲ್ಲಿರುವ ಒಂದು ರಾಸಾಯನಿಕ ಇಂಧನ. ರಾಕೆಟ್ ಚಲನೆಯಲ್ಲಿ ಉಪಯೋಗಿಸುವ ರಾಸಾಯನಿಕ ಇಂಧನಗಳು ದ್ರವರೂಪದಲ್ಲಿರಬಹುದು, ಘನರೂಪದಲ್ಲಿರಬಹುದು-ಇವುಗಳ ಒಟ್ಟು ಹೆಸರು ಪ್ರೊಪೆಲ್ಲೆಂಟ್ಸ್. 
ಕೆಲವು ದ್ರವ ರಾಸಾಯನಿಕ ಇಂಧನಗಳ ವಿವರ ಇಲ್ಲಿದೆ :  

ಆಕ್ಸಿಜನ್ ಪೂರಕ

ಇಂಧನ

ದ್ರವ ಆಕ್ಸಿಜನ್

ದ್ರವ ಆಕ್ಸಿಜನ್

ದ್ರವ ಆಕ್ಸಿಜನ್

80% ಹೈಡ್ರೊಜನ್ ಪರಾಕ್ಸೈಡ್

20% ನೀರು

ರೆಡ್ ಫ್ಯೂಮಿಂಗ್ ನೈಟ್ರಿಕ್ ಆಮ್ಲ

90% ನೈಟ್ರಿಕ್ ಆಮ್ಲ

10% ಸಲ್ಫ್ಯೊರಿಕ್ ಆಮ್ಲ

75% ಈಥೈಲ್ ಆಲ್ಕೊಹಾಲ್,
25% ನೀರು.
ದ್ರವ ಹೈಡ್ರೊಜನ್

ದ್ರವ ಅಮೋನಿಯ

57% ಮೀಥೈಲ್ ಆಲ್ಕೊಹಾಲ್

30% ಹೈಡ್ರಾಜೀನ್

ಅನಿಲಿನ್

ವೀನೈಲ್ ಐಸೊಬ್ಯೊಟೈಲ್

ಈಥರ್

ಬೀಜ ಇಂಧನಗಳು (ನ್ಯೂಕ್ಲಿಯರ್ ಫ್ಯುಯೆಲ್ಸ್) : ಯುರೇನಿಯಂ-233 (9U233), ಯುರೇನಿಯಂ-235 (92U235), ಪ್ಲುಟೋನಿಯಂ-239 (91Pu239), ಹೈಡ್ರೊಜನ್ (1ಊ1),  ಟ್ರಿಶಿಯಂ (1ಊ3) ಮತ್ತು ಲಿಥಿಯಂ-6 (3ಐi6) ಇವು ಶಕ್ತಿಯ (ಎನರ್ಜಿ) ಬಿಡುಗಡೆಗಾಗಿ ಉಪಯೋಗಿಸಬಹುದಾದ ಬೀಜ (ನ್ಯೂಕ್ಲಿಯರ್) ಇಂಧನಗಳು. ಯುರೇನಿಯಂ-233 ಮತ್ತು ಪ್ಲುಟೋನಿಯಂ-239 ಪ್ರಕೃತಿಯಲ್ಲಿ ಧಾರಾಳವಾಗಿ ಸಿಕ್ಕುವುದಿಲ್ಲ.  ಟ್ರಿಶಿಯಂನ ಅರ್ಧಾಯು (ಹಾಫ್ ಲೈಫ್) 12 ವರ್ಷ.  ಆದ್ದರಿಂದ ಅದೂ ಧಾರಾಳವಾಗಿ ಸಿಕ್ಕುವುದಿಲ್ಲ.  
ಸ್ವಾಭಾವಿಕವಾಗಿ ಸಿಕ್ಕುವ ಲೋಹದಲ್ಲಿ ಯುರೇನಿಯಂ-235ರ ಪ್ರಮಾಣ 0.72%. ಉಳಿದುದೆಲ್ಲ ಯುರೇನಿಯಂ-238.  ಇದನ್ನು ಮಂದ (ಸ್ಲೋ) ನ್ಯೂಟ್ರಾನುಗಳಿಂದ ಪ್ಲುಟೋನಿಯಂ-239 ಆಗಿ ಪರಿವರ್ತಿಸಬಹುದು.  
92U238 + 0ಟಿ1 (ಮಂದ) ( 92U239 + γ
92U239(β +93ಓಠಿ239
93ಓಠಿ239(β+94Pu239
  ಹೀಗೆಯೇ ಥೋರಿಯಂ-232ನ್ನು ಯುರೇನಿಯಂ-233 ಆಗಿ ಪರಿವರ್ತಿಸಬಹುದು.  
90ಖಿh232 + 0ಟಿ1 (ಮಂದ) ( 92ಖಿh233 + γ
90ಖಿh233(β +91Pಚಿ233
91Pಚಿ233(β+92U233
ಇಲ್ಲಿ 91Pಚಿ23 ಪ್ರೋಟಾಕ್ಟಿನಿಯಂ, ಇಂಧನವನ್ನು ಉತ್ಪಾದಿಸಲು ಬೇಕಾಗಿರುವ ಸಮಸ್ಥಾನಿಗಳ (ಐಸೊಟೋಪ್ಸ್) ಹೆಸರು ಫಲೋತ್ಪಾದಕ ವಸ್ತುಗಳು.  ಟ್ರಿಶಿಯಂನ್ನು ಉತ್ಪಾದಿಸಲು ಲಿಥಿಯಂ-6 ಸಮಸ್ಥಾನಿಯನ್ನು ಉಪಯೋಗಿಸುತ್ತಾರೆ.  
3ಐi6+0ಟಿ1(2ಊe4+1ಊ3
ಇಲ್ಲಿ 2ಊe4 ಹೀಲಿಯಂ
ಶಕ್ತಿಯ ಉತ್ಪಾದನೆಗೆ ಇಂಧನ ಒಂದು ಗೊತ್ತಾದ ದರದಲ್ಲಿ (ರೇಟ್) ಉರಿಯಬೇಕು. ಇಂಧನವನ್ನು ಉರಿಸಲು ವ್ಯಯ ಮಾಡಬೇಕಾದ ಶಕ್ತಿ ಅದು ಉರಿಯುವುದರಿಂದ ಉತ್ಪತ್ತಿಯಾಗುವ ಶಕ್ತಿಗಿಂತ ಹೆಚ್ಚಾದರೆ ಅಂಥ ಇಂಧನ ಪ್ರಯೋಜನಕಾರಿಯಾದುದಲ್ಲ.  ಕಟ್ಟಿಗೆ, ಕಲ್ಲಿದ್ದಲು ಮತ್ತು ಎಣ್ಣೆ ಉರಿಯುವಾಗ ಉತ್ಪತ್ತಿಯಾಗುವ ಶಕ್ತಿಯಲ್ಲಿ ಒಂದಂಶ ಮಾತ್ರ ಅವು ಉರಿಯಲು ಉಪಯೋಗವಾಗುತ್ತದೆ. ಆದ್ದರಿಂದಲೇ ಅವು ಒಮ್ಮೆ ಉರಿಯಲು ಪ್ರಾರಂಭಿಸಿದರೆ ಪೂರ್ತಿ ಬೂದಿಯಾಗುವವರೆಗೆ ಆರುವುದಿಲ್ಲ.  
ಭಾರವಾದ ಬೀಜ ಇಂಧನಗಳು ಉರಿಯುವ ವಿಧಾನದ ಹೆಸರು ವಿದಳನ (ಫಿಷನ್). ಇದನ್ನು ಈ ಕೆಳಗೆ ಕಂಡಂತೆ ಸಾಂಕೇತಿಕವಾಗಿ ರೂಪಿಸಬಹುದು.  
		ಈ+ಟಿ (ಮಂದ)(ಘಿ+ಙ+vಟಿ (ವಿದಳನ) 
ಈ ವಿದಳನದಲ್ಲಿ ಬೀಜ, ಟಿ ನ್ಯೂಟ್ರಾನು, ಘಿ ಮತ್ತು ಙ ವಿದಳನ ತುಣುಕುಗಳು v  ವಿದಳನದಲ್ಲಿ ಬಿಡುಗಡೆಯಾಗುವ ನ್ಯೂಟ್ರಾನುಗಳ ಸಂಖ್ಯೆ.  ಇದು 2.5-2.9ವರೆಗೆ ವ್ಯತ್ಯಾಸವಾಗುತ್ತದೆ. 
ಒಂದು ಬೀಜ ವಿದಳನಗೊಂಡಾಗ ಸರಾಸರಿ 200 ಒev. ಶಕ್ತಿ ಬಿಡುಗಡೆಯಾಗುತ್ತದೆ.  ಈ ಶಕ್ತಿಯ ಬಹುಭಾಗ ವಿದಳನ ತುಣುಕುಗಳ ಚಲನಶಕ್ತಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.  
ಯುರೇನಿಯಂ-233, ಯುರೇನಿಯಂ-235 ಮತ್ತು ಪ್ಲುಟೋನಿಯಂ-239ನ್ನು ಶೀಘ್ರ ನ್ಯೂಟ್ರಾನುಗಳಿಂದಲೂ ವಿದಳನಗೊಳಿಸಬಹುದು.  ಇವನ್ನು ಉಪಯೋಗಿಸುವ ರಿಯಾಕ್ಟರುಗಳಲ್ಲಿ ಥೋರಿಯಂ-232 ಮತ್ತು ಯುರೇನಿಯಂ-238ರ ತಾಟುಗಳನ್ನು ನ್ಯೂಟ್ರಾನುಗಳ ಸಂಘರ್ಷಣಕ್ಕೆ ಒಡ್ಡಿ ಉರಿದುಹೋದುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇಂಧನವನ್ನು ಉತ್ಪಾದಿಸಬಹುದು.  
ಸಾಮಾನ್ಯವಾಗಿ ಶಕ್ತಿಯ ರಿಯಾಕ್ಟರುಗಳಲ್ಲಿ ಯುರೇನಿಯಂ-235ರ ಪ್ರಮಾಣ 1%-5%ರಷ್ಟು ಹೆಚ್ಚಾಗಿರುವ ಲೋಹವನ್ನು ಉಪಯೋಗಿಸುತ್ತಾರೆ.  ಲೋಹದಲ್ಲಿ ಯುರೇನಿಯಂ-235ರ ಪ್ರಮಾಣ ಹೆಚ್ಚುವಂತೆ ಮಾಡಲು ಎರಡು ವಿಧಾನಗಳನ್ನು ಅನುಸರಿಸಬಹುದು: ಗಾಳಿಯ ವಿಸರಣ ವಿಧಾನ ಮತ್ತು ಸೆಂಟ್ರಿಫ್ಯೂಗಲ್ ವಿಧಾನ. ಎರಡನೆಯ ವಿಧಾನ ಉಪಯುಕ್ತವಾಗುವ ಮಟ್ಟಕ್ಕೆ ಇನ್ನೂ ಬಂದಿಲ್ಲ.  
ಗಾಳಿಯ ವಿಸರಣ ವಿಧಾನದಲ್ಲಿ ಸರಂಧ್ರ ತಡೆಯ (ಪೋರಸ್ ಬ್ಯಾರಿಯರ್) ಮೂಲಕ ಹಾಯುವ ಬೇರೆ ಬೇರೆ ತೂಕದ ಅಣುಗಳ ಗತಿಯಲ್ಲಿರುವ ವ್ಯತ್ಯಾಸ ಉಪಯೋಗಕ್ಕೆ ಬರುತ್ತದೆ.  ಯುರೇನಿಯಂ-235ರ ಪ್ರಮಾಣವನ್ನು ಹೆಚ್ಚಿಸಲು ಬಳಸುವ ತಡೆಯಲ್ಲಿ ಚ.ಅಂ. ಒಂದಕ್ಕೆ ನೂರು ಮಿಲಿಯಕ್ಕಿಂತ ಹೆಚ್ಚು ರಂಧ್ರಗಳಿರುತ್ತವೆ.  ಕಡಿಮೆ ತೂಕದ ಅಣುಗಳು ಅದರ ಮೂಲಕ ಬೇಗ ವಿಸರಣಗೊಳ್ಳುತ್ತವೆ. (ವಿಸರಣಗೊಳ್ಳುತ್ತವೆ ಎನ್ನುವುದಕ್ಕಿಂತ ತರುತ್ತವೆ ಎಂದು ಹೇಳುವುದೇ ಹೆಚ್ಚು ಸಮಂಜಸ.)
ಯುರೇನಿಯಂ ಸಮಸ್ಥಾನಿಗಳು ಬೇರ್ಪಡಿಸಲು ಅವನ್ನು ಯುರೇನಿಯಂ ಹೆಕ್ಸಫ್ಲೋರೈಡ್ (Uಈ6) ರೂಪದಲ್ಲಿ ಉಪಯೋಗಿಸುತ್ತಾರೆ. ಸಾಮಾನ್ಯ ಉಷ್ಣತೆಯಲ್ಲಿ ಘನರೂಪದಲ್ಲಿದ್ದರೂ ಇದನ್ನು ಆವಿ ಮಾಡಲು ಹೆಚ್ಚು ಕಾಯಿಸಬೇಕಾದ ಪ್ರಮೇಯವಿರುವುದಿಲ್ಲ.  
ವಿಸರಣಪರಿಮಾಣ ಅಣುವಿನ ಜಡಮಾನದ ವರ್ಗಮೂಲ ಹೆಚ್ಚಿದಂತೆ ಕಡಿಮೆಯಾಗುತ್ತದೆ. ಆದ್ದರಿಂದ ಬೇರ್ಪಡಿಕೆಯ ಅಪವರ್ತನವನ್ನು (ಫ್ಯಾಕ್ಟರ್) α>0   ಎಂದಿಟ್ಟುಕೊಂಡು ಅದನ್ನು 
		  (ಭಾರ)/(ಹಗುರ)
					 
 	ಎಂದು ತೋರಿಸಬಹುದು.  ಯುರೇನಿಯಂ ಹೆಕ್ಸಫ್ಲೋರೈಡಿಗೆ ಸಂಬಂಧಿಸಿದಂತೆ 
ಒ (ಭಾರ) = [238+6ಘಿ19] = 352 ಮತ್ತು
ಒ (ಹಗುರ) = [235+619] =349. ಆದ್ದರಿಂದ
			352
	α	=  		=1.0043
		        349
ಇದರಿಂದ ಒಮ್ಮೆ ವಿಸರಣಗೊಂಡ ಆವಿ ಕಡಿಮೆ ಒತ್ತಡದ ಕಡೆ (x-1) ರಷ್ಟು ಕಡಿಮೆ ತೂಕದಿಂದ ಅಣುಗಳಿಂದ ಸಮೃದ್ಧವಾಗಿರುತ್ತದೆಂದು ಗ್ರಹಿಸಬಹುದು. (x-1)ರ ಹೆಸರು ಸಮೃದ್ಧಾಪವರ್ತನ (ಎನ್ರಿಚ್‍ಮೆಂಟ್ ಫ್ಯಾಕ್ಟರ್). ಯುರೇನಿಯಂ ಹೆಕ್ಸಫ್ಲೋರೈಡಿಗೆ ಸಂಬಂಧಿಸಿದಂತೆ ಇದು 0.0043.  ಗಣನೀಯ ಪ್ರಮಾಣದಲ್ಲಿ ಯುರೇನಿಯಂ-235ನ್ನು ಹೆಚ್ಚಿಸಲು ಅನೇಕ ವಿಸರಣಹಂತಗಳನ್ನು ಉಪಯೋಗಿಸಬೇಕು.  
ಚಿತ್ರದಲ್ಲಿ ವಿಸರಣಹಂತಗಳ ಸ್ವಲ್ಪಭಾಗವನ್ನು ತೋರಿಸಿದೆ.  ಃ ಎಂದು ನಮೂದಿಸಿರುವ ಹಂತದಲ್ಲಿ ಕೆಳಗಿನಿಂದ ಪ್ರವೇಶಿಸುವ ಆವಿಯ ಅರ್ಧ ಭಾಗ ಊಧ್ರ್ವಮುಖವಾಗಿ ವಿಸರಣಗೊಳ್ಳುತ್ತದೆಂದು ಭಾವಿಸಬಹುದು. ಇದರಲ್ಲಿ ಯುರೇನಿಯಂ-235ರ ಅಂಶ ಹೆಚ್ಚು.  ಉಳಿದುದು ಅ ಕಡೆಗೆ ಪಂಪ್ ಆಗುತ್ತದೆ. ಹೀಗೆ ಎಲ್ಲ ಹಂತಗಳಲ್ಲೂ ನಡೆಯುವುದರಿಂದ ಮೇಲೆ ಹೋದಂತೆ ಆವಿಯಲ್ಲಿ ಯುರೇನಿಯಂ-235ರ ಪ್ರಮಾಣ ಹೆಚ್ಚುತ್ತದೆ.  ಹೆಚ್ಚು ಹೆಚ್ಚು ಇಂಥ ವಿಸರಣ ಹಂತಗಳಿಂದ ಕೂಡಿರುವ ಉಪಕರಣದ ನೆರವಿನಿಂದ ಬೇಕಾದ ಪ್ರಮಾಣದಲ್ಲಿ ಯುರೇನಿಯಂ-235ರ ಸಮೃದ್ಧಿಯನ್ನು ಪಡೆಯಬಹುದು.  
ರಿಯಾಕ್ಟರಿನಲ್ಲಿ ಉಪಯೋಗಿಸುವ ಯಾವುದೇ ಒಂದು ಇಂಧನ ಘಟಕ (ಫ್ಯುಯಲ್ ಎಲಿಮೆಂಟ್) ಪೂರ್ಣವಾಗಿ ಉರಿಯುವುದಿಲ್ಲ. ಭಾಗಶಃ ಉರಿದ ಘಟಕಗಳನ್ನು ಹೊರಗೆ ತೆಗೆದು ಅದರಿಂದ ಉರಿಯದೆ ಉಳಿದ ಇಂಧನವನ್ನೂ ಇಂಧನವಾಗಿ ಮಾರ್ಪಟ್ಟ ಇತರ ಸಮಸ್ಥಾನಿಗಳನ್ನೂ ಬೇರ್ಪಡಿಸಬಹುದು.  
ಹಗುರವಾದ ಬೀಜ ಇಂಧನಗಳು ಉರಿಯುವ ವಿಧಾನದ ಹೆಸರು ಸಂಲಯ (ಫ್ಯೂಷನ್), ಸದಾ ಹೈಡ್ರೊಜನ್ನಿನ ಪರಮಾಣುಗಳು ಸಂಲಯಗೊಂಡು ಹೀಲಿಯಂ ಪರಮಾಣುಗಳಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದಲೇ ಸೂರ್ಯ ಮತ್ತು ನಕ್ಷತ್ರಗಳು ಯಥೇಚ್ಛವಾಗಿ ಶಕ್ತಿಯನ್ನು ಹೊರಚೆಲ್ಲುತ್ತ ಬೆಳಗುತ್ತಿವೆ.  

ಚಿತ್ರ-4

ವಿದಳನಕ್ರಿಯೆ ಸಾಮಾನ್ಯ ಉಷ್ಣತೆಯಲ್ಲೂ ನಡೆಯುತ್ತದೆ.  ಆದರೆ ಸಂಲಯನಕ್ರಿಯೆ ನಡೆಯಲು ಹತ್ತು ಲಕ್ಷ ಡಿಗ್ರಿಗೆ ಮಿಗಿಲಾದ ಉಷ್ಣತೆ ಬೇಕು. ಇಷ್ಟು ಹೆಚ್ಚಿನ ಉಷ್ಣತೆಯನ್ನು ಪ್ರಯೋಗಶಾಲೆಯಲ್ಲಿ ಪಡೆಯುವುದು ಕಷ್ಟ; ಹೈಡ್ರೊಜನ್ ಮತ್ತು ಲಿಥಿಯಂ ಪರಮಾಣುಗಳಿಂದ ಉಪಯೋಗ್ಯವಾದ ಸಂಲಯನದ ಶಕ್ತಿಯನ್ನು ಪಡೆಯಲು ಇನ್ನೂ ಆಗಿಲ್ಲ. ಟ್ರಿಶಿಯಂ ಮತ್ತು ಡ್ಯುಟೀರಿಯಂ ಮಿಶ್ರಣ ಸಂಲಯನಕ್ರಿಯೆಗೆ ಬಹಳ ಯೋಗ್ಯವಾದುದಾದರೂ ವೆಚ್ಚದ ದೃಷ್ಟಿಯಿಂದ ಇದರ ಬಳಕೆಯೂ ಆಗಿಲ್ಲ. ಆದ್ದರಿಂದ ಉಪಯುಕ್ತ ಸಂಲಯನ ಶಕ್ತಿಯ ಉತ್ಪಾದನೆಗೆ ತೊಡಗಿಸಬಹುದಾದ ಹಗುರ ಬೀಜ ಇಂಧನ ಡ್ಯುಟೀರಿಯಂ ಒಂದೇ.  
ಡ್ಯುಟೀರಿಯಂ ಪರಮಾಣುಗಳು ಎರಡು ರೀತಿಯಲ್ಲಿ ಸಂಲಯನಗೊಳ್ಳುತ್ತವೆ. 

                                 1ಊ2+1ಊ2(1ಊ3+1ಊ1
                                                                 |
                                                                 |
                                                            ಊ3     ( 2ಊe3+ಔಟಿ1

ಇಲ್ಲಿ ಉತ್ಪತ್ತಿಯಾದ ಟ್ರಿಶಿಯಂ ಮತ್ತೊಂದು ಡ್ಯುಟೇರಿಯಂ ಪರಮಾಣುವಿನೊಂದಿಗೆ ಸಂಲಯನಗೊಳ್ಳಬಹುದು. ಹೀಲಿಯಂ (2ಊe3) ಕೂಡ ನ್ಯೂಟ್ರಾನಿನೊಂದಿಗೆ ಪ್ರಕ್ರಿಯೆಗೊಂಡು ಒಂದು ಪ್ರೋಟಾನನ್ನೂ ಒಂದು ಟ್ರಿಶಿಯಂನನ್ನೂ ಒದಗಿಸಬಹುದು. ಇಷ್ಟನ್ನೂ ಸಾಂಕೇತಿಕವಾಗಿ
                     31ಊ2(2ಊe4+1ಊ1+oಟಿ1
ಎಂದು ಬರೆಯಬಹುದು. ಇದರಿಂದ ಒಟ್ಟು 21.6 ಒev ಶಕ್ತಿ ದೊರೆಯುತ್ತದೆ.  
ಭಾರವಾದ ಬೀಜ ಇಂಧನಗಳಿಂದ ಪ್ರತಿ ಬೀಜಗಳಿಗೆ 0.9 ಒev ಶಕ್ತಿ ದೊರೆತರೆ ಹಗುರ ಬೀಜ ಇಂಧನಗಳಿಂದ ಪ್ರತಿ ಬೀಜಕ್ಕೆ 4.0 ಒev. ಶಕ್ತಿ ದೊರೆಯುತ್ತದೆ.  
ಸಾಮಾನ್ಯವಾಗಿ ಸಿಕ್ಕುವ ಅದುರಿನಲ್ಲಿ ಯುರೇನಿಯಂ ಲೋಹದ ಅಂಶ 0.1%-0.58%ರಷ್ಟು ಮಾತ್ರ ಇರುತ್ತದೆ.  ಇದು 1%-4%ರಷ್ಟಿರುವುದು ಪಿಚ್‍ಬ್ಲೆಂಡ್ ಮತ್ತು ಯುರಾನಿಗೈಟುಗಳಲ್ಲಿ, ಮೋನಜೈಟಿನಲ್ಲಿ ಥೋರಿಯಂ ಆಕ್ಸೈಡ್ ರೂಪದಲ್ಲಿ 1%-5%ರಷ್ಟು ಸಿಕ್ಕುತ್ತದೆ.  ಇಷ್ಟಲ್ಲದೆ ಬ್ರೌನ್ ಮತ್ತು ಸಿಲ್ವರ್ ಅವರು ಗ್ರಾನೈಟ್ ಕಲ್ಲಿನ ಬೆಟ್ಟಗಳಲ್ಲಿ ಟನ್ ಒಂದಕ್ಕೆ 15 ಗ್ರಾಮಿನಷ್ಟು ಯುರೇನಿಯಂ ಮತ್ತು ಥೋರಿಯಂ ಲೋಹಗಳು ಸಿಕ್ಕುತ್ತವೆಂದು ತೋರಿಸಿದ್ದಾರೆ. ಆದರೆ ಇದರಲ್ಲಿ 1/5 ಭಾಗವನ್ನು ಮಾತ್ರ ಸುಲಭವಾಗಿ ಬೇರ್ಪಡಿಸಬಹುದು.  
ಗಣಿಗಳಿಂದ ಮತ್ತು ಬೆಟ್ಟಗಳಿಂದ ದೊರೆಯುವ ವಿದಳನಯೋಗ್ಯವಾದ ಲೋಹ 21x106 ಟನ್. ಇದರಿಂದ (ಟನ್ನಿಗೆ  75x1012 ಃಖಿU) 16x1020 ಃಖಿU. ಶಕ್ತಿಯನ್ನು ಉತ್ಪಾದಿಸಬಹುದು ಎಲ್ಲ ದೇಶಗಳ ಸಾಲಿಯಾನ ಶಕ್ತಿಯ ಬೇಡಿಕೆ 1017 ಃಖಿUಗಳು. ಇಷ್ಟು ಶಕ್ತಿಯನ್ನು ಕಟ್ಟಿಗೆ, ಕಲ್ಲಿದ್ದಲು ಮತ್ತು ಎಣ್ಣೆಯಿಂದಲೇ ಪೂರೈಕೆ ಮಾಡಿದರೆ ಅವುಗಳೆಲ್ಲ ಸುಮಾರು 200 ವರ್ಷಗಳಲ್ಲಿ ಬರಿದಾಗುತ್ತವೆ. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದರೂ ವಿದಳನಶಕ್ತಿಯ ನಿಕ್ಷೇಪಗಳು ಒಂದು ಸಾವಿರ ವರ್ಷಗಳ ಕಾಲ ಉಳಿಯಬಲ್ಲವು.  
ಸಂಲಯನಶಕ್ತಿಯ ಬಿಡುಗಡೆ ಸಾಧ್ಯವಾದರೆ ಇಂಧನದ ಪೂರೈಕೆಗಾಗಿ ಯಾವ ಕಾಲಕ್ಕೂ ಯೋಚಿಸಬೇಕಾಗಿಲ್ಲ. ಒಂದು ಘನ ಅಡಿ ಸಮುದ್ರ ನೀರಿನಲ್ಲಿರುವ ಡ್ಯುಟೀರಿಯಂ 280x106  ಃಖಿU. ಗಳಷ್ಟು ಶಕ್ತಿಯನ್ನು ಕೊಡಬಲ್ಲದು. ಇದು 10 ಟನ್ ಕಲ್ಲಿದ್ದಲಿಗೆ ಸಮ. ಸಮುದ್ರದ ನೀರಿನಲ್ಲಿರುವಷ್ಟು ಡ್ಯುಟೀರಿಯಂಅನ್ನು ಶಕ್ತಿಯ ಉತ್ಪಾದನೆಗೆ ತೊಡಗಿಸಿದರೆ ಜಗತ್ತಿನ ಬೇಡಿಕೆಯನ್ನು ಅದು 10 ಬಿಲಿಯನ್ ವರ್ಷಗಳವರೆಗೆ ಪೂರೈಸುತ್ತದೆ.  							       
    (ಎಸ್.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ